ಕೋಳಿ ಮರಿಗಳು ವಿತರಿಸಲು ಅರ್ಜಿ ಆಹ್ವಾನ, ನ.10 ಕೊನೆ ದಿನ: ಡಾ.ಶಂಕರ ಕಣ್ಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ ವತಿಯಿಂದ 2025-26 ನೇ ಸಾಲಿನ ಚಿತ್ತಾಪುರ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ 5 ವಾರದ ದೇಶಿ ಕೋಳಿ ಮರಿಗಳನ್ನು ತಲಾ 20 ರಂತೆ ವಿತರಿಸಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಶಂಕರ ಕಣ್ಣಿ ತಿಳಿಸಿದ್ದಾರೆ.
ತಾಲೂಕಿಗೆ ಒಟ್ಟು 99 ಗುರಿಗಳು ನಿಗದಿಪಡಿಸಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ವರ್ಗವಾರು ಆಯ್ಕೆ ಮಾಡಲಾಗುವುದು. ಆಸಕ್ತಿಯುಳ್ಳ ಗ್ರಾಮೀಣ ಭಾಗದ ಮಹಿಳೆಯರು ನಿಗದಿತ ನಮೂನೆಯಲ್ಲಿ ಪಶು ಆಸ್ಪತ್ರೆ, ಚಿತ್ತಾಪುರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಮತ್ತು ಮುಖ್ಯ ಪಶು ವೈದ್ಯಾಧಿಕಾರಿಗಳು(ಆಡಳಿತ), ಪಶು ಆಸ್ಪತ್ರೆ, ಚಿತ್ತಾಪುರ ರವರನ್ನು ಸಂಪರ್ಕೀಸಲು ಕೋರಲಾಗಿದೆ. ಆಸಕ್ತಿಯುಳ್ಳ ಗ್ರಾಮೀಣ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೋಳ್ಳಬಹುದು ಎಂದು ತಿಳಿಸಿದ್ದಾರೆ.

