ಕೊಂಚೂರು ಹನುಮಾನ್ ಜಾತ್ರೆಯಲ್ಲಿ ಮಧ್ಯೆ, ಮಾಂಸ ಮಾರಾಟ ನಿಷೇಧಿಸುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೊಂಚೂರು ಗ್ರಾಮದ ಹನುಮಾನ್ ದೇವಸ್ಥಾನದ ಜಾತ್ರಾ ನಿಮಿತ್ಯ ಮದ್ಯ ಮಾರಾಟ, ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಚಿತ್ತಾಪುರ ಪ್ರಖಂಡ ಅಧ್ಯಕ್ಷ ಶ್ರೀನಿವಾಸ ಹಳ್ಳಿ ನೇತೃತ್ವದಲ್ಲಿ ಮುಖಂಡರು ಗುರುವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರಾಂತ ಪ್ರಮುಖ ಅಂಬರೀಷ್ ಸುಲೇಗಾಂವ ಮಾತನಾಡಿ, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಹನುಮಾನ್ ದೇವಸ್ಥಾನದ ಜಾತ್ರಾ ಮಹೋತ್ಸವ ಡಿಸೆಂಬರ್ 15 ರಿಂದ 20 ರವರಿಗೆ ಸತತ ಐದು ದಿನಗಳವರೆಗೆ ಹನುಮಾನ್ ದೇವಸ್ಥಾನದ ಮೂರ್ತಿ ವಿಶೇಷ ಅಭಿಷೇಕಗಳ ಮೂಲಕ ಜಾತ್ರೆ ಬಹಳ ಅದ್ದೂರಿಯಾಗಿ ಪ್ರಾರಂಭವಾಗುತ್ತದೆ. ದೂರ ದೂರದಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಈ ಜಾತ್ರೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಮಾಂಸ, ಮದ್ಯ ಮಾರಾಟ ಆಕ್ರಮವಾಗಿ ಕಾನೂನು ಭಯವಿಲ್ಲದೇ ನಡೆಯುತ್ತಿದ್ದು, ಜಾತ್ರೆಯ ಸಮಯದಲ್ಲಿ ಸಣ್ಣಪುಟ್ಟ ವಾಗ್ವಾದಗಳಿಂದ ದೊಡ್ಡ ಪ್ರಮಾಣದ ಜಗಳಗಳು ಕೂಡ ಆಗಿರುತ್ತವೆ. ಆದ್ದರಿಂದ ಈ ಜಾತ್ರೆಯನ್ನು ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ, ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಜಾತ್ರೆಯನ್ನು ಅಹಿಂಸಾ ಜಾತ್ರೆಯೆಂದು ಆಚರಿಸುವ ಮೂಲಕ ಜಿಲ್ಲೆಗೆ ಮಾದರಿ ಜಾತ್ರೆಯಾಗಬೇಕು ಈ ನಿಟ್ಟಿನಲ್ಲಿ ಮಧ್ಯೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಪದಾಧಿಕಾರಿಗಳಾದ ಅಂಬರೀಷ್ ಸುಲೇಗಾಂವ, ವಿಜಯಕುಮಾರ್ ಬಿದರಿ, ಮಹಾದೇವ ಅಂಗಡಿ, ಸಾಬಣ್ಣ ಪೂಜಾರಿ, ಮಲ್ಲಿಕಾರ್ಜುನ ಉಪ್ಪಾರ, ಮೇಘರಾಜ್ ಗುತ್ತೇದಾರ, ನಾಗರಾಜ್ ರೆಡ್ಡಿ, ಬಾಬುರೆಡ್ಡಿ, ಸಚೀನ, ವಿನಯಕುಮಾರ್, ಶಿವುಕುಮಾರ, ಶಿವರಾಮ್ ಚವ್ಹಾಣ, ರವಿ ಗುತ್ತೇದಾರ, ನರೇಶ್, ಅಭಿಷೇಕ, ಸಾಯಿಕುಮಾರ್, ಸಿದ್ದಲಿಂಗ ಸೇರಿದಂತೆ ಅನೇಕರು ಇದ್ದರು.