ಕೊಂಚೂರಿನ ಶ್ರೀ ಹನುಮಾನ ಜಾತ್ರೆಯಲ್ಲಿ ಮಧ್ಯ, ಮಾಂಸ ಮಾರಾಟ ನಿಷೇಧ ಮಾಡಲು ವೀರಣ್ಣ ಯಾರಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಸಮೀಪದ ಕೊಂಚೂರಿನಲ್ಲಿ ಡಿಸೆಂಬರ್ 6 ರಿಂದ 19 ಜರುಗುತ್ತಿರುವ ಜಾತ್ರೆಯಲ್ಲಿ ಮಧ್ಯ, ಮಾಂಸ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನ ಕೊಂಚೂರು ಗ್ರಾಮದ ಆಂಜನೇಯ ದೇವಸ್ಥಾನದ ಜಾತ್ರೆ ಜಿಲ್ಲೆ ಸೇರಿದಂತೆ ಇತರ ರಾಜ್ಯದಲ್ಲೂ ಇದು ಸುಪ್ರಸಿದ್ಧವಾಗಿದೆ. ಅದಕ್ಕಾಗಿ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಾನಾ ಭಾಗದಿಂದ ಆಗಮಿಸುತ್ತಾರೆ.
ಸುಮಾರು 15 ದಿನಗಳವರೆಗೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಅಭಿಷೇಕಗಳ ಮೂಲಕ ಜಾತ್ರೆ ಪ್ರಾರಂಭವಾಗುತ್ತದೆ. ಈ ಜಾತ್ರೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಂಸ, ಮಧ್ಯ ಮಾರಾಟವನ್ನು ಅಕ್ರಮವಾಗಿ ಕಾನೂನಿನ ಭಯವಿಲ್ಲದೆ ನಡೆಸುತ್ತವೆ, ಜಾತ್ರೆಯ ಸಮಯದಲ್ಲಿ ಇದರಿಂದ ಸಣ್ಣಪುಟ್ಟ ಕಲಹದ ಜೊತೆಗೆ ದೊಡ್ಡ ಪ್ರಮಾಣದ ಜಗಳಗಳು ಕೂಡ ಹಿಂದೆ ಆಗಿರುತ್ತವೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಪಾವಿತ್ರ್ಯತೆ ದೃಷ್ಟಿಯಿಂದ ಈ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ, ಮಾಂಸ ಮತ್ತು ಮಧ್ಯ ಮಾರಾಟವನ್ನು ನಿಷೇಧ ಮಾಡುವ ಮೂಲಕ ಈ ಜಾತ್ರೆಯನ್ನು ನಡೆಸಿ ಜಿಲ್ಲೆಗೆ ಮಾದರಿ ಜಾತ್ರೆಯಾಗುವಂತೆ ಕ್ರಮಕೈಗೊಳ್ಳಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.