ಕೋರವಾರ ಅಣಿವೀರಭದ್ರೇಶ್ವರ ಮಹಾರಾಜ ಕೀ ಜೈ… ವಿಜೃಂಬಣೆಯಿಂದ ಜರುಗಿದ ಅಣಿವೀರಭದ್ರೇಶ್ವರ ರಥೋತ್ಸವ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವನಾದ ಕಾಳಗಿ ತಾಲೂಕಿನ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ 9.30 ಕ್ಕೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ರಥೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ವೈವಿದ್ಯಮಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ನಸುಕಿನ ಜಾವದಲ್ಲಿ ಅಣಿವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಜರುಗಿತು. ನಂತರ ದೇವಸ್ಥಾನದ ಹೊರಭಾಗದಲ್ಲಿ ಹೂ ಹಾರಗಳಿಂದ ವಿಶೇಷವಾಗಿ ಅಲಂಕಾರ ಮಾಡಿರುವ ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು. ಸಾಯಂಕಾಲ ಕೋರವಾರ ಗ್ರಾಮದಿಂದ ನಂದಿಧ್ವಜ ಮತ್ತು ಕಳಸ ಕುಂಭಗಳನ್ನು ಡೊಳ್ಳು, ವಾದ್ಯ, ಮೇಳ, ಝೇಂಕಾರ, ಭಜನೆ, ಜಯಘೋಷಗಳೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿತು. ಪುರವಂತರ ಕುಣಿತದೊಂದಿಗೆ ವಿವಿಧಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರ ಜಯಘೋಷಗಳ ನಡುವೆ ರಾತ್ರಿ 9.30 ಕ್ಕೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ನೆರೆದಿದ್ದ ಸಾವಿರಾರು ಭಕ್ತರು ಉತ್ತುತ್ತಿ, ಖಾರೀಕು- ನಾರು, ನಾಣ್ಯ, ಹೂ-ಹಣ್ಣುಗಳನ್ನು ತೇರಿನತ್ತ ಎಸೆದು ಆಣಿವೀರಭದ್ರೇಶ್ವರ ಮಹಾರಾಜ ಕೀ ಜೈ ಘೋಷಣೆ ಯೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಕಾಳಗಿ ಗ್ರೇಡ್-1 ತಹಸೀಲ್ದಾರ ಘಮಾವತಿ ರಾಠೋಡ, ದೇವಸ್ಥಾನದ ಪ್ರಧಾನ ಅರ್ಚಕ ಧನಂಜಯ ಹಿರೇಮಠ, ಅರ್ಚಕ ಅಂಬರೀಷ ಹಿರೇಮಠ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ, ಪಟ್ಟದ ಪುರವಂತ ಸೋಮೇಶ ಕಂಠಿ, ಶಿವಪುತ್ರಪ್ಪ ಸಾಹು ಹಲಚೇರಿ, ಹಣಮಂತರಾವ ಬಸಲಿಂಗ, ಸುಭಾಷ ಬಸಲಿಂಗ, ಬಸಯ್ಯ ಪೂಜಾರಿ, ಮಲ್ಲಿಕಾರ್ಜುನ ಸೂರಾ, ಶಿವಕುಮಾರ ಕಲಶೆಟ್ಟಿ, ಸಂಗಯ್ಯ ಪುರಾಣಿಕ, ಸಿದ್ದು ಗೋನಾಯಕ, ಶಿವರಾಜ ಸ್ವಾಮಿ ಮಠ, ವೀರಯ್ಯ ಸ್ವಾಮಿ, ಮಹಾರುದ್ರ ಶಾಹಾಬಾದ, ಮಲ್ಲಿಕಾರ್ಜುನ ಗೋಳೆದ, ವೀರೇಶ ಗುಳೇದ, ಗುರುರಾಜ ಇಂಗಿನಶೆಟ್ಟಿ, ಶಿವಕುಮಾರ ಇಂಗಿನ ಶೆಟ್ಟಿ, ಬಸವರಾಜ ಕಂಠಿ, ಅಣ್ಣರಾವ ಕಂಠಿ, ಅನೀಲ ಜೋಶಿ, ಮಲ್ಲು ಕೋರವಾರ, ರಮೇಶ ವಿಶ್ವಕರ್ಮ, ಸಿದ್ದು ಸೂರಾ, ಸಾರಂಗಯ್ಯ ಸ್ವಾಮಿ, ಅಣವೀರಯ್ಯ ಸ್ವಾಮಿ, ರಾಕೇಶ ದೊಡ್ಡಮನಿ, ಕಲ್ಯಾಣರಾವ ಕಂಠಿ, ಶರಣಪ್ಪ ಮೇಲೇರಿ, ನಾಗಣ್ಣ ಕಲಶೆಟ್ಟಿ, ಗುರುರಾಜ ಶೆಟ್ಟಿ, ಕ್ಷೇಮಲಿಂಗಯ್ಯ ಸ್ವಾಮಿ, ಧೂಳಪ್ಪ ಕುಪನೂರ, ರಮೇಶ ಚವ್ಹಾಣ, ಎಮ್.ಎಸ್ ಪೂಜಾರಿ, ರೇವಣಸಿದ್ದಯ್ಯ ಸ್ವಾಮಿ ಕಲಗುರ್ತಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಶಾಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಸಿಪಿಐ-3, ಪಿಎಸ್‌ಐ-10, ಎಎಸ್‌ಐ-22, ಎಚ್‌ಪಿಸಿ 110, 2 ಕೆಎಸ್‌ಆರ್‌ಪಿ, 1 ಡಿ.ಆರ್ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.