ಕುಡಿಯುವ ನೀರಿಗಾಗಿ ರಟಕಲ್ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ರಟಕಲ್ ಗ್ರಾಮದ ವಾರ್ಡ್ ನಂಬರ್ 4 ರ ಹೊಸ ಕೇರಿಯಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿನ ಹಾಹಾಕಾರವಿದ್ದು ಜನರು ಪರದಾಡುವಂತಾಗಿದೆ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಬಹಳ ಹಿಂದಿನಿಂದಲೂ ಸಾರ್ವಜನಿಕ ಕುಡಿಯುವ ನೀರು ಸರಬರಾಜು ಮಾಡಲು ಹಳೆ ಪೈಪಲೈನ್ ಇದ್ದು, ಸಾರ್ವಜನಿಕ ಕುಡಿಯುವ ನೀರಿನ ಸಣ್ಣದಾದ ನೀರಿನ ಟಾಕಿ ಕಟ್ಟಡ ಮಾಡಿದ್ದರು ಹಾಗೂ ಟಾಕಿ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿತ್ತು ಹೀಗಾಗಿ ಜನರು ನೈಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಈಗ ಟಾಕಿ ಪೈಪ್ ಲೈನ್ ಇದ್ದು ಕುಡಿಯುವ ನೀರು ಸರಬರಾಜು ಬಂದ್ ಮಾಡಿದ್ದರಿಂದ ತುಂಬಾ ಖೇದಕರ ಸಂಗತಿಯಾಗಿದೆ. ಮಳೆಗಾಲದಲ್ಲಿ ಮಳೆ ನೀರಿನ ನೀರು ಹಿಡಿದುಕೊಂಡು ಬ್ಯಾಲಾರ್, ಕೊಡ, ಭೋಗೊಣಿ, ಬುಟ್ಟಿ ತುಂಬಿ ಹಿಡಿದಿಟ್ಟು ಕೊಂಡು ಜೀವನ ಸಾಗಿಸುತ್ತಿದ್ದರು ಈ ವಾರ್ಡಿನ ಜನರು ತುಂಬಾ ಅತಿ ಕಡು ಬಡವರು ಕೂಲಿ ನಾಲಿ ಮಾಡಿ ತಮ್ಮ ಜೀವನ ನಡೆಸುತ್ತಿರುವ ಜನರು ಅತಿ ಬಡತನ ಪರಿಸ್ಥಿತಿ ಎದುರಿಸುವ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ, ದನಕರುಗಳಿಗೆ, ಕುರಿಗಳಿಗೆ, ಸಾರ್ವಜನಿಕರ ಕೊಡ ನೀರು ಇಲ್ಲದೆ ಜನರು ಹಿಡಿ ಶಾಪ್ ಹಾಕುತ್ತಿದ್ದಾರೆ ಈ ವಾರ್ಡಿಗೆ ಕನ್ನೆ ಕೊಡ ಬೇಕಾದರು ಸಹ ನೀರಿನ ಗಂಭೀರತೆಯನ್ನು ಎದುರಿಸುವುದು ನೋಡಿ ಭಯಾನಕ ವಾತವರಣ ನಿರ್ಮಾಣವಾಗಿದೆ ಜನರು ದಿನನಿತ್ಯ ಕಣ್ಣಿರಿನಿಂದ ಕೈ ತೊಳಿಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಾಲು ಬೆಳಿಗ್ಗೆ ದೂರದಿಂದ ನೀರು ತಂದು ಕೂಲಿ ಕೆಲಸಕ್ಕೆ ಹೊಗಬೆಕಾದ ಪರಿಸ್ಥಿತಿ ಬಂದಿದೆ ಕುಡಿಯುವ ನೀರು ತರುವ ಸಲುವಾಗಿಯೇ ಶಾಲೆಗೆ ಹೋಗುವ ಬಡವರ ಮಕ್ಕಳು ಶಿಕ್ಷಣದ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ, ಶಾಲೆಗಳಲ್ಲಿ ಒಂದು ಪಾಠ ತಪ್ಪಿಸಿಕೊಳ್ಳುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಈ ವಾರ್ಡಿನ ನಾಗರಿಕರು ಗ್ರಾಮ ಪಂಚಾಯತಿ ಗೆ ಬಂದು ಅರ್ಜಿ ಸಲ್ಲಿಸಿದ್ದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನರು ಬೇಸತ್ತು ರೊಷಹೊಗಿದ್ದಾರೆ ಬಡ ಜನರು ಪಾಲಿಗೆ ಕರುಣೆ ತೊರದ ಗ್ರಾಮ ಪಂಚಾಯತಿ ಇದ್ದು ಸತ್ತಂತಾಗಿದೆ ಮತ್ತು ಕುಡಿಯುವ ನೀರಿನ ಹೆಸರಿನಲ್ಲಿ ಸರ್ಕಾರದ ಹಣ ಖರ್ಚಾಗೊದು ತಪ್ಪುತ್ತಿಲ್ಲ, ಕುಡಿಯುವ ನೀರು ಸಿಗುತ್ತಿಲ್ಲ ಜನರು ರೊಷಿಹೊಗಿದ್ದಾರೆ. ತಕ್ಷಣವೇ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು
ಸ್ಥಳಕ್ಕಾಗಮಿಸಿದ ಕಾಳಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಅವರು ಮನವಿ ಪತ್ರ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಇ ಯುವರಾಜ್ ರಾಥೋಡ, ಉಪ ತಹಸೀಲ್ದಾರ ಸಂತೋಷ್, ಪಿಎಸ್ಐ ಶೀಲಾದೇವಿ, ಗ್ರಾಮದ ಮುಖಂಡರಾದ ನೀಲಕಂಠ ವಾಡೆದ್ ಸುಭಾಷ್ ಹುಳಿಗೇರಾ, ದಿಲೀಪ್ ನಾಗುರೆ, ದೇವೇಂದ್ರಪ್ಪ ವಾಡೆದ್, ಮಲ್ಲು ಮರಗುತ್ತಿ, ರಾಜು ನುಂಗಾರಿ, ಸಿದ್ದಣ್ಣ ಮಲಘಾಣ, ರೇವಣಸಿದ್ದ ಬಿರಾದಾರ, ಭಾಗಿರತಿ ಕಾಳಮಂದರಗಿ, ಮುರುಗಮ್ಮ ಅಂಬಮ್ಮ. ಮಲ್ಲಮ್ಮ ಭುವಿ, ವಿಜಯಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.