ಕುಮಾರಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ದತ್ತಾತ್ರೇಯ ಬುಕ್ಕಾ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ಲ ಇದರ 42 ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡುತ್ತಿರುವ ರಾಜ್ಯ ಮಟ್ಟದ ಕುಮಾರಶ್ರೀ ಪ್ರಶಸ್ತಿ ಗೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ರಂಗಭೂಮಿ ಕಲಾವಿದ, ಪೋಷಕ ದತ್ತಾತ್ರೇಯ ಬುಕ್ಕಾ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಮಾಲಿಕ ಎಲ್.ಬಿ.ಶೇಖ್ ಮಾಸ್ತರ ಮತ್ತು ಸಂಚಾಲಕ ಶ್ರೀಧರ್ ಹೆಗಡೆ ಅವರು ತಿಳಿಸಿದ್ದಾರೆ.
ಇದೇ ಸೆ.27 ರಂದು ಕಲಬುರಗಿ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬೆಳಗ್ಗೆ 10.30 ಕ್ಕೆ ಹಾರಕೂಡ್ ಶ್ರೀ ಡಾ.ಚೆನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಕುಮಾರಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದ ಸಂಘದ ಮಾಲಕರಿಗೆ ಹಾಗೂ ಆಯ್ಕೆಯಾದ ದತ್ತಾತ್ರೇಯ ಬುಕ್ಕಾ ಅವರಿಗೆ ಚಿತ್ತಾಪುರ ತಾಲೂಕಿನ ಕಲಾವಿದರಿಂದ ಅಭಿನಂದನೆಗಳು ಸಲ್ಲಿಸಲಾಗುವುದು ಎಂದು ರಂಗಭೂಮಿ ನಿರ್ದೇಶಕ ಶಿವಣ್ಣ ಹಿಟ್ಟಿನ್, ಕಲಾವಿದರಾದ ಬಾಬು ಕಾಶಿ, ಕಾಶಿನಾಥ ಬೆಳಗುಂಪಾ, ವಿರೇಶ ಕರದಾಳ, ಈರಣ್ಣ ಈಸಬಾ ಅವರು ತಿಳಿಸಿದ್ದಾರೆ.