ಮಾಡಬೂಳ ಕಿರು ಮೃಗಾಲಯ ಮೂರು ತಿಂಗಳಲ್ಲಿ ಉದ್ಘಾಟನೆ, ಸಸ್ಯ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಅರಣ್ಯ ಸಚಿವ ಈಶ್ವರ ಖಂಡ್ರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮಾಡಬೂಳ ಹತ್ತಿರದ ಸಸ್ಯ ಕ್ಷೇತ್ರಕ್ಕೆ ಹಾಗೂ ಕಿರು ಮೃಗಾಲಯಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಸಸ್ಯ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು ಎತ್ತರವಾದ ಸಸಿಗಳನ್ನು ಹೆಚ್ಚು ಮಾಡಿ ಉತ್ತಮ ಮತ್ತು ಆಕರ್ಷಕ ಪರಿಸರ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಒದಗಿಸುತ್ತೇನೆ ಎಂದು ಹೇಳಿದರು.
ಮಾಡಬೂಳ ಗ್ರಾಮದ ಹತ್ತಿರ 42 ಎಕರೆ ಭೂಮಿಯಲ್ಲಿ ಕಿರು ಮೃಗಾಲಯ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿದ್ದು ಬರುವ ಮೂರು ತಿಂಗಳೊಳಗೆ ಉದ್ಘಾಟನೆ ಆಗಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶರಣಕುಮಾರ ಮೋದಿ, ಜಿಪಂ ಮಾಜಿ ಅಧ್ಯಕ್ಷ ರಮೇಶ್ ಮರಗೋಳ, ಗುಂಡಗುರ್ತಿ ಪಿಕೆಪಿಎಸ್ ಅಧ್ಯಕ್ಷ ಸುನೀಲ್ ದೊಡ್ಡಮನಿ, ಅರಣ್ಯ ಇಲಾಖೆಯ ಸಿಸಿಎಫ್ ಸುನೀಲ್ ಕುಮಾರ್ ಪಣವಾರ, ಡಿಸಿಎಫ್ ಸುಮೀತಕುಮಾರ್ ಪಾಟೀಲ, ಸಾಗರ ತವಡೆ, ಎಸಿಎಫ್ ಮಹ್ಮದ್ ಮುನೀರ್ ಅಹ್ಮದ್, ಚಂದ್ರಶೇಖರ ಹೆಮಾ, ಆರ್’ಎಫ್ಓ ವಿಜಯಕುಮಾರ್, ನಾಗೇಶ್, ಡಿಆರ್’ಎಫ್ ಝಟ್ಟೆಪ್ಟ, ಪೀರಪ್ಪ ಕಟ್ಟಿ, ಚಂದ್ರಕಾಂತ, ಜಾಫರ್ ಸೇರಿದಂತೆ ಇತರರು ಇದ್ದರು.