ಮಾದಿಗ ಸಮಾಜದ ಹಿರಿಯ ನಾಯಕ ಮಾಪಣ್ಣ ಹದನೂರ ನಿಧನಕ್ಕೆ ಯಾದಗಿರಿ ಜಿಲ್ಲೆಯ ಮುಖಂಡರ ಶೋಕ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಮಾದಿಗ ದಂಡೋರ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಾಪಣ್ಣ ಹದನೂರ ನಿಧನಕ್ಕೆ ಜಿಲ್ಲೆಯ ಮಾದಿಗ ಸಮಾಜದ ಮುಖಂಡರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮಾದಿಗ ಸಮಾಜದ ಜಾಗೃತಿ ಹಾಗೂ ಸಂಘಟನೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಮಾಪಣ್ಣ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಮುಖಂಡರಾದ ದೇವೀಂದ್ರನಾಥ್ ನಾದ್, ಹಣಮಂತ ಇಟಗಿ, ಎಂ.ಕೆ. ಬೀರನೂರ, ಮಂಜುನಾಥ ದಾಸನಕೇರಿ, ಬಸವರಾಜ ಮೇತ್ರಿ, ಗೋಪಾಲ ದಾಸನಕೇರಿ, ಶಿವರಾಜ ದಾಸನಕೇರಿ, ಸ್ವಾಮಿದೇವ ದಾಸನಕೇರಿ, ಚಂದ್ರಶೇಖರ ಕಡೆಸೂರ, ಯಲ್ಲಪ್ಪ ಮಾಳಿಕೇರಿ, ಡಾ. ಎಸ್.ಎಚ್. ಮುದ್ನಾಳ, ಆಂಜಿನೇಯ ಬಬಲಾದಿ, ಮಲ್ಲಿಕಾರ್ಜುನ ಬಬಲಾದಿ, ಸಲ್ಮಾನ್ ಯಡ್ಡಳ್ಳಿ, ಅನಿಲ್ ಕರಾಟೆ, ಯಲ್ಲಪ್ಪ ಮಾಳಿಕೇರಿ, ಸಾಬರಡ್ಡಿ ಮುಂಡ್ರಿಕೇರಿ, ಬಂಟಿ ದಾಸನಕೇರಿ ಸೇರಿದಂತೆ ಇನ್ನಿತರರು ಶೋಕ ವ್ಯಕ್ತಪಡಿಸಿದ್ದಾರೆ.