Oplus_0

ಮಾಲಗತ್ತಿಯಲ್ಲಿ ಫೆ.22 ರಂದು ಸಂಕಲ್ಪ ಸೇವೆ, 25 ರಂದು 2501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ: ಚನ್ನಬಸವ ಶರಣರು

ನಾಗಾವಿ ಎಕ್ಸಪ್ರೆಸ್

ಶಹಾಬಾದ: ತಾಲೂಕಿನ ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ತ ಫೆ.25ರಂದು 2501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಚನ್ನಬಸವ ಶರಣರು ತಿಳಿಸಿದರು.

ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫೆ.22 ರಿಂದ ಸಂಕಲ್ಪ ಸೇವೆ ಪ್ರಾರಂಭವಾಗಲಿದ್ದು. ಫೆ.25 ರಂದು ಹಾರಕೂಡದ ಶ್ರೀ ಡಾ.ಚನ್ನಬಸವ ಶಿವಾಚಾರ್ಯರು, ಮುಗುಳನಾಗಾಂವ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಂದ ದಾಸೋಹ ಮಹಾಮನೆ ಉದ್ಘಾಟನೆಯಾಗಲಿದೆ. ಉಭಯ ಶ್ರೀಗಳಿಗೆ ತುಲಾಭಾರ, ಸಂಜೆ 2501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಈಶ್ವರ ಯಾದಗಿರಿ, ಬಾಲಕೃಷ್ಣ ಜೋಶಿ, ಅಣವೀರ ಪಡಶೆಟ್ಟಿ, ಧರ್ಮರಾಜ ಶಣಮೋ, ಶಿವಣ್ಣಗೌಡ ಪೊಲೀಸ್ ಪಾಟೀಲ್, ಕಾಶಿನಾಥ ಸಣಮೋ, ರಮೇಶ ಭಟ್, ಈಶ್ವರ ಮುಗಳನಾಗಾಂವ, ದೇವೆಂದ್ರ ಪಡಶೆಟ್ಟಿ, ದೇವಪ್ಪ ಸಣಮೋ, ಹರಿ ಕಟ್ಟಿ, ಗುಂಡು ಕಟ್ಟಿ, ಸುದರ್ಶನ, ವಾಸು ಅಲಿಪುರ ಇತರರಿದ್ದರು.

ಶಹಾಬಾದ ಸುದ್ದಿ: ನಾಗರಾಜ್ ದಂಡಾವತಿ

Spread the love

Leave a Reply

Your email address will not be published. Required fields are marked *

error: Content is protected !!