ರಕ್ತದಾನದಿಂದ ಆರೋಗ್ಯ ವೃದ್ಧಿ: ಮಾಲಗತ್ತಿ ಶ್ರೀ ಚನ್ನಬಸವ ಶರಣರು
ನಾಗಾವಿ ಎಕ್ಸಪ್ರೆಸ್
ಶಹಾಬಾದ: ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಭಾವನೆ ಜೊತೆಗೆ ದಾನಿಯ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದ ಪೀಠಾಧಿಪತಿ ಚನ್ನಬಸವ ಶರಣರು ಹೇಳಿದರು.
ತಾಲೂಕಿನ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ತ ಶಹಾಬಾದ ತಾಲೂಕ ಪತ್ರಕರ್ತರು ಹಾಗೂ ಕಲಬುರಗಿಯ ಜೀವನ ಆಧಾರ ಮೆಡಿಕಲ್ ಫೌಂಡೇಷನ್ ಮತ್ತು ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬರುವ ಮುನ್ನ ಆಗಾಗ್ಗೆ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಜೀವನ ಆಧಾರ ಮೆಡಿಕಲ್ ಫೌಂಡೇಷನ್ ವೈದ್ಯ ಡಾ.ಸುಷ್ಮಾ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವುದರೊಂದಿಗೆ ವೈಯಕ್ತಿಕವಾಗಿ ಹೃದಯಾಘಾತ, ದೇಹದಲ್ಲಿ ಕೊಬ್ಬು, ಥೈರಾಡ್ ನಂತಹ ಹಲವಾರು ಸಮಸ್ಯೆಗಳಿಂದ ದೂರ ಇರಬಹುದು ಎಂದರು.
ಸುಮಾರು 120 ಜನ ಭಕ್ತರು ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಮಾತ್ರೆ, ಟಾನೀಕ ಪಡೆದುಕೊಂಡರು, 40 ಜನ ರಕ್ತದಾನ ಮಾಡಿದರು.
ಕಾರ್ಯಮದಲ್ಲಿ ದೇವಸ್ಥಾನದ ಈಶ್ವರ ಯಾದಗಿರಿ, ಬಾಲಕೃಷ್ಣ ಜೋಶಿ, ಶಾಂತಪ್ಪ ಸಾಲೊಳ್ಳಿ, ಅಣವೀರ ಪಡಶೆಟ್ಟಿ, ಧರ್ಮು ಸಣಮೋ, ಕಾಶಿನಾಥ, ಈಶ್ವರ ಮುಗುಳನಾಗಾಂವ, ಅನೀಲ ಸ್ವಾಮಿ, ಶಿವು ಬಾಳಕ, ವೈದ್ಯಕೀಯ ಸಿಬ್ಬಂದಿಗಳಾದ ಸವಿತಾ, ಮುಕೇಶ ಚವ್ಹಾಣ, ಉಮೇಶ, ಆಶ್ವಿನಿ, ವಿಶಾಲ್, ಅಭಿಷೇಕ, ಜಾಕೀರ್, ಪತ್ರಕರ್ತರಾದ ಕೆ.ರಮೇಶ ಭಟ್ಟ, ಲೋಹಿತ ಕಟ್ಟಿ, ನಿಂಗಣ್ಣ ಜಂಬಗಿ, ದಾಮೋಧರ ಭಟ್ಟ ಉಪಸ್ಥಿತರಿದ್ದರು.
ಶಹಾಬಾದ್ ವರದಿ: ನಾಗರಾಜ್ ದಂಡಾವತಿ