ಮರಗೋಳ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಪುರಾಣ | ಭಕ್ತಿ ಭಾವ ಇದ್ದಾಗ ಸಮೃದ್ಧಿ ಆಗಲಿದೆ: ಮಲ್ಲಯ್ಯ ಸ್ವಾಮಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗ್ರಾಮದ ಜನರಲ್ಲಿ ಭಕ್ತಿ ಭಾವ ಇದ್ದಾಗ ಸಮೃದ್ಧಿ ಆಗಲಿದೆ ಎಂದು ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ಹೇಳಿದರು
ತಾಲೂಕಿನ ಮರಗೋಳ ಗ್ರಾಮದ ಶ್ರೀ ಬೀರಲಿಂಗೇಶ್ವರ – ಶ್ರೀ ಮಾಳಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮರೇಪ್ಪ ಮುತ್ಯಾ ಇವರ ಸಾನಿಧ್ಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ರೇವಣ್ಣಸಿದ್ದೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರಗೋಳ ಚಿಕ್ಕ ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲೇ ಬೀರಲಿಂಗೇಶ್ವರ ದೇವಸ್ಥಾನ, ನವಗ್ರಹ, ನಾಗದೇವತೆ ಸ್ಥಾಪನೆ ಮಾಡಿದ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮರಗೋಳ ಗ್ರಾಮದ ಮೇಲೆ ದೈವಿ ಶಕ್ತಿ ಇದೆ ಹೀಗಾಗಿ ಇಲ್ಲಿ ಧಾರ್ಮಿಕ ಪರಿವರ್ತನೆ ಕಾರ್ಯ ನಡೆಯುತ್ತಿದೆ. ಒಳ್ಳೆಯದನ್ನೇ ಹೇಳಬೇಕು ಹಾಗೂ ಹೆಚ್ಚು ಪ್ರಚಾರ ಮಾಡಬೇಕು ಹೊರತು ಕೆಟ್ಟದರ ಬಗ್ಗೆ ಪ್ರಚಾರ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಚಿಕ್ಕ ಗ್ರಾಮದಲ್ಲಿ ಭವ್ಯವಾದ ಮಾಳಿಂಗರಾಯ ದೇವಸ್ಥಾನ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಮರಗೋಳ ಭಕ್ತಿವಂತರ ಗ್ರಾಮವಾಗಿದೆ ಎಂದು ಹೇಳಿದರು.
ಬೀರಲಿಂಗೇಶ್ವರ ಮಾಳಿಂಗರಾಯ ಇವರು ಜಗತ್ತಿನ ಎರಡು ಕಣ್ಣುಗಳಂತೆ, ಇವರಿಬ್ಬರೂ ಗುರುಶಿಷ್ಯರು, ಹಾಲು ಕೆಡಬಹುದು ಆದರೆ ಹಾಲು ಮತದ ಸಮಾಜ ಎಂದೂ ಕೆಡುವುದಿಲ್ಲ. ಹಾಲಿನಂತೆ ಸ್ವಚ್ಛ ಇರುವ ಸಮಾಜ ಅದು ಹಾಲುಮತ ಸಮಾಜ ಎಂದರು.
ಧಾರ್ಮಿಕ ಕಾರ್ಯಕ್ರಮಗಳಿಂದ ಧರ್ಮಜಾಗೃತಿ ಮೂಡಲಿದೆ ಈ ನಿಟ್ಟಿನಲ್ಲಿ ಗುಡಿ ಗುಂಡಾರಗಳು ನೆಮ್ಮದಿಯ ಕೇಂದ್ರಗಳಾಗಿವೆ. ದೇವರನ್ನು ಪೂಜಿಸುವ ಏಕೈಕ ದೇಶ ಅದು ಭಾರತ ಎಂದು ಹೇಳಿದರು.
ರಾಷ್ಟೀಯ ಪ್ರಶಸ್ತಿ ಪುರಸ್ಕೃತ ಶ್ರೀ ವೀರೇಶ್ ಶಾಸ್ತ್ರಿಗಳು ಮಲಕೂಡ ಪುರಾಣ ಪ್ರವಚನ ನಡೆಸಿಕೊಟ್ಟರು, ಶ್ರೀ ಶಿವಕುಮಾರ ಪಾಟೀಲ್ ಬೇಡಜೇವರ್ಗಿ ಕಲಬುರಗಿ ಸಂಗೀತ ಸೇವೆ, ರಮೇಶ್ ವಿಶ್ವಕರ್ಮ ಸೇಡಂ ತಬಲಾ ಸೇವೆ ಸಲ್ಲಿಸಿದರು.
ಯಲ್ಲಾಲಿಂಗ ಪೂಜಾರಿ ಮಾತನಾಡಿ, ಪುರಾಣ ಕಾರ್ಯಕ್ರಮಕ್ಕೆ ನಾಳೆ ದಿ.17 ರಂದು ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮಕ್ಕೆ ಮುಗಳಕೋಡ – ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಪುರಾಣ ಮುಕ್ತಾಯ ಕಾರ್ಯಕ್ರಮ ಮಾ. 18 ರಂದು ಸಂಜೆ 7 ಗಂಟೆಗೆ ಪೂಜ್ಯ ಶ್ರೀ ಹುಲಿಜಂತಿ ಗುರುಗಳು ಮರಗೋಳ ಗ್ರಾಮಕ್ಕೆ ಆಗಮಿಸಿ ಶ್ರೀ ಬೀರಲಿಂಗೇಶ್ವರ ಹಾಗೂ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಸಮಸ್ತ ಭಕ್ತ ಗಣಕ್ಕೆ ಆಶೀರ್ವಾದ ನೀಡಲಿದ್ದಾರೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ನಾಗಣ್ಣಗೌಡ ಪಾಟೀಲ, ಸಿದ್ದು ಮುಗುಟಿ, ನಾಗು ಮರಗೋಳ, ಸಂತೋಷ ಪೂಜಾರಿ, ಸಾಬಣ್ಣ ಕೊಂಡಂಪಳ್ಳಿ, ತಮ್ಮಣ್ಣ ಡಿಗ್ಗಿ, ಶರಣು ಸಾಹು ತೊನಸನಳ್ಳಿ, ಬಸವರಾಜ ಕೊಂಡಂಪಳ್ಳಿ, ಶ್ರೀಮಂತ ಮುಗುಟಿ, ಶರಣಪ್ಪ ಸಂಗಾವಿ, ಅಮೃತ್ ನಿಪ್ಪಾಣಿ, ಮಲ್ಲೇಶಿ ಮುಗುಟಿ, ಶರಣಪ್ಪ ಜಂಬಗಿ, ಸಾಬಣ್ಣ ಕೊಳಕೂರ, ಶಿವಶರಣಪ್ಪ ಮುಗುಟಿ, ಶಿವಯೋಗಿ ಮುಗುಟಿ, ಶ್ರೀಮಂತ ಮುಗುಟಿ, ನಾಗಪ್ಪ ಮಾರ್ಥಂಡಪ್ಪ, ನಾಗಪ್ಪ ಮುಗುಟಿ, ಬೀರಲಿಂಗ ಪೂಜಾರಿ, ಕಿಶನ್ ನಾಯಕ, ಶಿವಯೋಗಿ ಪೂಜಾರಿ, ಶರಣಪ್ಪ ಕೊಂಡಂಪಳ್ಳಿ ಸೇರಿದಂತೆ ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಸಮಿತಿಯ ಸದಸ್ಯರು ಇದ್ದರು. ಯಲ್ಲಾಲಿಂಗ ಪೂಜಾರಿ ನಿರೂಪಿಸಿದರು.

