ಎಂಎಲ್ಸಿ ಸಿ.ಟಿ.ರವಿ ಮೇಲಿನ ಹಲ್ಲೆಗೆ ಅಯ್ಯಪ್ಪ ಪವಾರ್ ತೀವ್ರ ಖಂಡನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ಮೇಲಿನ ಹಲ್ಲೆಯನ್ನು ಭೀಮನಳ್ಳಿ ಗ್ರಾಮ ಪಂಚಾಯತ ಸದಸ್ಯ ಮತ್ತು ಮಹಾಶಕ್ತಿ ಕೇಂದ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಪವಾರ್ ರಾಮತೀರ್ಥ ತೀವ್ರವಾಗಿ ಖಂಡಿಸಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿರವರ ಮೇಲೆ ಹಲ್ಲೆ ನಡೆಸಲು ಕಾಂಗ್ರೇಸಿನ ಕೆಲ ಕಾರ್ಯಕರ್ತರು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಗೂಂಡಾ ರೀತಿಯ ವರ್ತನೆ ತೋರಿರುವುದು ಖಂಡನೀಯವಾದ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಒಬ್ಬ ಜನಪ್ರತಿನಿಧಿಯನ್ನು ರಕ್ಷಣೆ ನೀಡದ ಸರ್ಕಾರ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ಹಲ್ಲೆಗೆ ಮುಂದಾದ ಗುಂಪನ್ನು ತಕ್ಷಣವೇ ರಾಜ್ಯದ ಪೊಲೀಸರು ಬಂಧಿಸಿ, ಸಿ.ಟಿ.ರವಿಯವರಿಗೆ ಹೆಚ್ಚಿನ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಿ.ಟಿ ರವಿಯವರನ್ನು ಯಾವುದೇ ನೋಟಿಸ್ ಕೋಡದೆ ಅವರನ್ನು ಬಂಧಿಸಿ, ಕಾಂಗ್ರೇಸ್ ಸರಕಾರ ಕಾನೂನು ಸುವ್ಯವಸ್ಥೆಯನ್ನು ರಾಜ್ಯದಲ್ಲಿ ಹಾಳುಮಾಡುತ್ತಿದ್ದಾರೆ. ಒಬ್ಬ ಶಾಸಕರನ್ನು ಇಡೀ ರಾತ್ರಿ ನಿರ್ಜನ ಪ್ರದೇಶಗಳಲ್ಲಿ ಸುತ್ತಾಡಿಸಿ ಅವರನ್ನು ಬೆದರಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಿರುವುದು ಮೆಲ್ನೋಟಕ್ಕೆ ಕಂಡುಬಂದಿದ್ದು, ಇಂತಹ ಬೆಳವಣಿಗೆಯನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇಂತಹ ಘಟನೆಗಳಿಂದ ಭಾರತೀಯ ಜನತಾ ಪಕ್ಷ ಹೆದರುವುದಿಲ್ಲ ನಮ್ಮ ಹೋರಾಟ ಇನ್ನು ಪ್ರಖರವಾಗಿರಲಿದ್ದು, ನಾವು ಕಾಂಗ್ರೆಸ್ ಸರಕಾರದ ವಿರುದ್ಧ ಸಿಡಿದೆದ್ದು ಪ್ರತಿರೋಧ ಮುನ್ನಡೆಸುತ್ತೇವೆ. ರಾಜ್ಯ ಸರಕಾರದ ಇಂತಹ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಿ.ಟಿ ರವಿರವರ ಮೇಲೆ ಹಲ್ಲೆ ಮಾಡಲು ಯತ್ನಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.