ಮೊಗಲಾ ಗ್ರಾಮದಲ್ಲಿ ಗ್ರಾಮ ದೇವತೆ ದೇವಸ್ಥಾನ ಉದ್ಘಾಟನೆ, ಯುವಕರಿಬ್ಬರ ಸ್ವಂತ 2 ಲಕ್ಷ ಹಣದಲ್ಲಿ ನಿರ್ಮಾಣವಾದ ದೇವಸ್ಥಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡ ಗ್ರಾಮ ದೇವತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
ಮೊಗಲ ಗ್ರಾಮ ಪಂಚಾಯಿತಿ ಸದಸ್ಯ ಬನ್ನೇಶ್ ಸುಲೇಗಾಂವ ಹಾಗೂ ಬಾಗು ದೊರೆ ಅವರು ತಮ್ಮ ಸ್ವಂತ ಅಂದಾಜು 2 ಲಕ್ಷ ಹಣವನ್ನು ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಬನ್ನೇಶ್ ಸುಲೇಗಾಂವ ಮಾತನಾಡಿ, ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಊರ ಕಾರ್ಯ ಮಾಡಲಾಗುತ್ತಿದೆ ಆದರೆ ದೇವಸ್ಥಾನ ತೀರಾ ಹಳೆಯದಾಗಿತ್ತು ಯಾವುದೇ ಆಸರೆ ಇರಲಿಲ್ಲ ಇದರಿಂದ ಭಕ್ತರಿಗೂ ತೀವ್ರ ತೊಂದರೆಯಾಗಿತ್ತು ಹೀಗಾಗಿ ಊರಿಗೆ ಒಳ್ಳೆಯದಾಗಲಿ ಮತ್ತು ಭಕ್ತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭಾಗಮ್ಮ ನಾಯ್ಕೊಡಿ, ರಾಜು ಕೆಂಪನೂರ್, ಮುಖಂಡರಾದ ಅನಿಲ್ ಲಕ್ಕಾ, ವಿಶ್ವನಾಥ್ ಲಕ್ಕಾ, ರಾಮಲಿಂಗ ತಳವಾರ, ಶಿರೋದಿನ ಮುಲ್ಲಾ, ರಾಜು ದೊರೆ, ಸಾಬಯ್ಯ ನಾಯ್ಕೊಡಿ, ರಾಜು ಗುತ್ತೇದಾರ್, ಗೌಸ್ ಮುಲ್ಲಾ, ಶರ್ಪುದ್ದೀನ್ ಪಟೇಲ್, ಸಾಬಯ್ಯಾ ದೊರೆ, ಬಸವರಾಜ್ ಭಜಂತ್ರಿ, ಯಲ್ಲಾಲಿಂಗ ಪೂಜಾರಿ ಸೇರಿದಂತೆ ಊರಿನ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು ಇದ್ದರು