ನಾನಾಡಿದ್ದು ಗಾದೆ ಮಾತು ಸಚಿವರಿಗೆ ನಿಂದನೆ ಮಾಡಿಲ್ಲ, ಕ್ಷಮೆ ಕೇಳುವಂತ ತಪ್ಪು ಮಾಡಿಲ್ಲ: ಛಲವಾದಿ ನಾರಾಯಣಸ್ವಾಮಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆನೆ ಹೋಗುವಾಗ ನಾಯಿ ಬೊಗಳುತ್ತದೆ ಎನ್ನುವುದು ಒಂದು ಗಾದೆ ಮಾತು, ಆ ಗಾದೆ ಮಾತು ಹೇಳಿದ್ದೇನೆ ಹೀಗಾಗಿ ನಾನು ನಿಂದನೆ ಮಾಡಿಲ್ಲ, ಕ್ಷಮೆ ಕೇಳುವಂತ ತಪ್ಪು ನಾನು ಮಾಡಿಲ್ಲ ಹೀಗಾಗಿ ಒಂದು ವೇಳೆ ನಾನು ಆಡಿದ ಮಾತಿನಿಂದ ಏನಾದರೂ ತಪ್ಪು ಅಂತ ಪ್ರಿಯಾಂಕ್ ಖರ್ಗೆ ಅವರಿಗೆ ಅನ್ನಿಸಿದ್ದರೆ ನಾನು ಅವರ ಜೊತೆ ನಾನು ಮಾತನಾಡುತ್ತೇನೆ ನಾವು ಹೊಸಬರೇನು ಅಲ್ಲ ಹಳೆಬರು ಎಂದು ಹೇಳಿದರು. ನಾನು ಗಾದೆ ಮಾತು ಹೇಳಿದ್ದೇನೆ ಅದು ಅಸಂವಿಧಾನಿಕ ಪದ ಅಲ್ಲ ರಾಜಕಾರಣದಲ್ಲಿ ಆಗಿಂದಾಗ್ಗೆ ಆಗಿ ಹೋಗುತ್ತವೆ, ನಾನಾಡಿದ ಮಾತು ತಪ್ಪು ಅಂತ ಎನ್ನಿಸಿದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಚಡ್ಡಿ ಹೊರನು, ಮೋದಿಯನ್ನು ವಿಷ ಸರ್ಪ ಹಾಗೂ ಅವನು ಎಂದು ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಳು ಎಂದು ಏಕವಚನದಲ್ಲಿ ನಿಂದನೆ ಮಾಡಿದ್ದರು ಆಗ ನಮಗೂ ನೋವಾಗಿತ್ತು ಅದನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡಿದ್ವಿ ಎಂದು ಹೇಳಿದರು.
ನಾನು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಚಿತ್ತಾಪುರಕ್ಕೆ ಬಂದಿದ್ದೆ ಅಷ್ಟರಲ್ಲಿ ಈ ರೀತಿ ಕಾಂಗ್ರೆಸ್ ಪಕ್ಷದವರು ಅಡ್ಡಗಟ್ಟಿದ್ದಾರೆ ಸಚಿವರ ಅಪ್ಪಣೆ ಇಲ್ಲದೆ ಈ ತರಹ ಮಾಡಲ್ಲ ಹೀಗಾಗಿ ಇಂತಹ ಬೆದರಿಕೆಗೆ ನಾನು ಹೆದರಲ್ಲ ಒಂದು ವೇಳೆ ಅಂತಹ ಸಮಯ ಬಂದರೆ ನಾನು ರಾತ್ರಿ ಇಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಭೀಮರೆಡ್ಡಿ ಕುರಾಳ, ಅಯ್ಯಪ್ಪ ರಾಮತೀರ್ಥ ಸೇರಿದಂತೆ ಇತರರು ಇದ್ದರು.