ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ, ವಿವಿಧ ಸಾಧಕರಿಗೆ ನಾಗಾವಿ ನಕ್ಷತ್ರ ಪ್ರಶಸ್ತಿ ಪ್ರದಾನ
ರಂಗಭೂಮಿ ಕಲಾವಿದರು ಅಧ್ಯಯನಶೀಲರಾಗಬೇಕು: ಪ್ರಭಾಕರ ಜೋಶಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಂಗ ಕಲೆ ವಿಶ್ವವ್ಯಾಪಿ ಆಗಬೇಕಿದೆ ಹೀಗಾಗಿ ರಂಗಭೂಮಿ ಕಲಾವಿದರು ಅಧ್ಯಯನಶೀಲರಾಗಬೇಕು ಎಂದು ರಂಗಾಯಣ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಜೋಶಿ ಕಿವಿಮಾತು ಹೇಳಿದರು.
ಪಟ್ಟಣದ ಮರ್ಹಬಾ ಫಂಕ್ಷನ್ ಹಾಲ್ ನಲ್ಲಿ ಗುರುವಾರ ನಡೆದ ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನಾಗಾವಿ ನಕ್ಷತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮಾಜದ ಕೊಳೆಯನ್ನು ಸ್ವಚ್ಛತೆ ಮಾಡುವವರು ಕಲಾವಿದರು ಹೀಗಾಗಿ ಕಲಾವಿದರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.
ರಂಗ ಮಾದ್ಯಮ ಪತ್ರಿಕಾ ಮಾಧ್ಯಮ ಸಮಾಜದ ಎರಡು ಕಣ್ಣುಗಳು ಇದ್ದಂತೆ ಎಂದು ಬಣ್ಣಿಸಿದರು. ಈ ನಿಟ್ಟಿನಲ್ಲಿ ಸಮಾಜ ಸ್ವಾಸ್ಥ್ಯ ಇದ್ದಾಗ ಕಲಾವಿದರು ಖುಷಿಪಡಿಸುತ್ತಾರೆ ಎಂದರು.
ರಂಗಭೂಮಿಯಲ್ಲಿ ಚಿತ್ತಾಪುರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ರಂಗಭೂಮಿಯಲ್ಲಿ ಮಹಿಳೆಯರು ಏಕೆ ಮುಂದೆ ಬರುತ್ತಿಲ್ಲ ಎಂಬುದು ಕಲಾವಿದರು ಆಲೋಚನೆ ಮಾಡದೆ ಹೋದರೆ ರಂಗಭೂಮಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕಂಬಳೇಶ್ವರ ಶೀ ಸೋಮಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಣ ಸಂಪಾದನೆ ಮಾಡುವುದು ಕಷ್ಟವೇನಲ್ಲ ಆದರೆ ಸಾಧನೆ ಮಾಡುವುದು ಕಷ್ಟ, ಸಾಧನೆಗೆ ಅಂತ್ಯವಿಲ್ಲ ಎಂದರು. ರಂಗಭೂಮಿ ಕಲಾವಿದರು ಚಿತ್ತಾಪುರದಲ್ಲಿ ಸಾಕಷ್ಟು ಇದ್ದಾರೆ ಹೀಗಾಗಿ ಇಲ್ಲಿ ರಂಗ ಚಟುವಟಿಕೆಗಳು ಸದಾ ನಡೆಯುತ್ತಿವೆ, ಈಗ ಜನ್ಮತಾಳಿದ ನಾಗಾವಿ ನಾಡು ನಾಟ್ಯ ಸಂಘದ ನೇತೃತ್ವದಲ್ಲಿ ಉತ್ತಮ ಕಾರ್ಯಚಟುವಟಿಕೆಗಳು ನಡೆಯಲಿ ಎಂದು ಹಾರೈಸಿದರು.
ಅಳ್ಳೋಳ್ಳಿ ಗದ್ದುಗೆ ಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು, ಸಾಹಿತಿ ನರಸಿಂಗರಾವ್ ಹೇಮನೂರ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಶಂಕರ ಹುವಿನಹಿಪ್ಪರಗಿ, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರು, ಸಂಘದ ಉಪಾಧ್ಯಕ್ಷ ರವಿ ವಿಟ್ಕರ್, ಸಂಘಟನಾ ಕಾರ್ಯದರ್ಶಿ ಅಯ್ಯಣ್ಣ ಗುತ್ತೆದಾರ, ಸಹ ಕಾರ್ಯದರ್ಶಿ ದೇವಿಂದ್ರ ಮಾಟನಳ್ಳಿ, ಖಜಾಂಚಿ ಶ್ರವಣಕುಮಾರ, ನಾಗಯ್ಯಸ್ವಾಮಿ ಮಠಪತಿ, ಸದಾನಂದ ರಾಠೋಡ, ಭೀಮಾಶಂಕರ, ಹಣಮಂತ್ ಮಡ್ಡಿ , ವಿನೋದ ಪವಾರ, ಇರ್ಫಾನ್, ಅಬ್ದುಲ್ ಮಜೀದ, ನಾಗರಾಜ ಕೋಳ್ಳಿ, ಸಂತೋಷ, ಭೀಮಾಶಂಕರ ಕೊಲಕುಂದಿ, ಭಾಸ್ಕರ್ ಕರಿಚಕ್ರ, ಕರಣಕುಮಾರ್ ಅಲ್ಲೂರು, ಸಾಹೇಬಗೌಡ ಇಟಗಿ, ಬಸವರಾಜ ಚಿನ್ನಮಳ್ಳಿ, ವಸಂತ ಚವ್ಹಾಣ, ದತ್ತಾತ್ರೇಯ ಬುಕ್ಕಾ, ಪ್ರಭು ಬೆಣ್ಣೂರ, ಬಾಬು ಕಾಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಘದ ಅಧ್ಯಕ್ಷ ಚಂದರ್ ಚವ್ಹಾಣ ಸ್ವಾಗತಿಸಿದರು, ಅಯ್ಯಣ್ಣ ಮಾಸ್ಟರ್ ಅಳ್ಳೋಳ್ಳಿ, ಶ್ರೀಧರ ಆಚಾರಿ ಪ್ರಾರ್ಥಿಸಿದರು, ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿದರು.
“ನಾಗಾವಿ ಕ್ಷೇತ್ರ ದಕ್ಷಿಣ ಭಾರತದ ಜ್ಞಾನದ ಬೇರು ಕಾಲಕ್ರಮೇಣ ಏನಾಗಿದೆ ಎಂಬುದು ಆತ್ಮಾವಲೋಕನ ಮಾಡಬೇಕಿದೆ”.-ಪ್ರಭಾಕರ ಜೋಶಿ ನಿಕಟಪೂರ್ವ ಅಧ್ಯಕ್ಷರು ರಂಗಾಯಣ ಕಲಬುರ್ಗಿ.