ನಾಲವಾರ ರೈಲ್ವೆ ಸ್ಟೇಷನ್ ಸಮಾಲೋಚನಾ ಸಮಿತಿ ಸದಸ್ಯರಾಗಿ ರಾಮರೆಡ್ಡಿ ಕೊಳ್ಳಿ ನಾಮನಿರ್ದೇಶನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತ ಸರ್ಕಾರದ ದಕ್ಷಿಣ ಮಧ್ಯ ರೈಲ್ವೆ ಸಚಿವಾಲಯದ ಗುಂತಕಲ್ ವಿಭಾಗದ ನಾಲವಾರ ರೈಲ್ವೆ ಸ್ಟೇಷನ್ ಸಮಾಲೋಚನಾ ಸಮಿತಿ ಸದಸ್ಯರಾಗಿ ಚಿತ್ತಾಪುರ ಪಟ್ಟಣದ ಬಿಜೆಪಿ ಯುವ ಮುಖಂಡ ರಾಮರೆಡ್ಡಿ ಕೊಳ್ಳಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಧನಂಜಯ್ ಕುಮಾರ್ ಸಿಂಗ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆ ಸಚಿವಾಲಯದ ಗುಂತಕಲ್ ವಿಭಾಗದ ಎಸ್.ಸಿ.ಸಿ-ಸ್ಟೇಷನ್ ಸಮಾಲೋಚನಾ ಸಮಿತಿ ಸದಸ್ಯರ ಪುನರ್ರಚನೆ 2 ವರ್ಷಗಳ ಅವಧಿಗೆ ಅಂದರೆ, 1 ಜನವರಿ 2025 ರಿಂದ 31 ಡಿಸೆಂಬರ್ 2026 ರವರೆಗೆ ಅಧಿಕಾರಾವಧಿ ಇರಲಿದೆ ಎಂದು ತಿಳಿಸಿದ್ದಾರೆ.