ನರಿಬೋಳ ಚಾಮನೂರ ಸೇತುವೆ ಕೆಲಸ ಪ್ರಾರಂಭಿಸಲು ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ ನಾಲ್ಕನೆ ದಿನಕ್ಕೆ

ನಾಗಾವಿ ಎಕ್ಸಪ್ರೆಸ್

ವಾಡಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಚಿತ್ತಾಪುರ ತಾಲೂಕಿನ ಚಾಮನೂರು ಮದ್ಯೆ ಇರುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕೆಲಸ ಪ್ರಾರಂಭಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಇನ್ನೇನು ಸೇತುವೆ ಉಧ್ಘಾಟನೆ ಆಗುತ್ತದೆ ಅಂತ ನಿರೀಕ್ಷೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಕಾಮಗಾರಿ ಸ್ಥಗಿತವಾಗಿ ಎಳು ವರ್ಷಗಳಾಗುತ್ತಾ ಬಂದರೂ ನರಿಬೋಳ ಗ್ರಾಮದವರೇ ಮಾಜಿ ಶಾಸಕರಿದ್ದರು ಕೆಲಸ ನಿಂತಲ್ಲೆ ನಿಂತಿತ್ತು, ಕಾಂಗ್ರೆಸ್ ಸರಕಾರ ಬಂದು ಡಾ.ಅಜಯಸಿಂಗ್, ಪ್ರಿಯಾಂಕ ಖರ್ಗೆ ಅವರು ಜಿಲ್ಲೆಯಲ್ಲಿ ಪ್ರಬಾವಿಗಳಿದ್ದರು ಈ ಕಡೆ ಲಕ್ಷ ವಹಿಸುತ್ತಿಲ್ಲಾ ಎಂದು ಎರಡು ಗ್ರಾಮಸ್ಥರು ಸೇರಿ ಧರಣಿ ಆರಂಭಿಸಿದ್ದಾರೆ‌.

ಭಾನುವಾರ ಮೂರನೇ ದಿನ ಮುಂದುವರೆದಿದೆ, ಧರಣಿ ಸ್ಥಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಆಗಮಿಸಿ ಮಾತಾನಾಡಿ, ಈ ವಿಷಯ ಜನಪರ ಇರುವುದರಿಂದ ಇಂಥ ವಿಷಯದಲ್ಲಿ ರಾಜಕೀಯ ಮಾಡದೇ ಬೆಂಬಲಿಸುತ್ತೆದ್ದೇವೆ ಎಂದು ಹೇಳಿದರು. ಹೋರಾಟಕ್ಕೆ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಾಗೂ ವಿವಿದ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ.

ಮೂರು ಬಾರಿ ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವೋಲಿಸಲು ಯತ್ನಿಸಿದ ಚಿತ್ತಾಪುರ ತಹಸಿಲ್ದಾರ ನಾಗಯ್ಯ ಹಿರೇಮಠ, ಲೋಕೋಪಯೋಗಿ, ರಾಷ್ಠ್ರಿಯ ಹೆದ್ದಾರಿ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೆಲಸ ಪ್ರಾರಂಬಿಸುವ ಬರವಸೆ ನೀಡಿ ಹೋರಾಟ ಕೈಬಿಡಲು ಮನವಿ ಮಾಡಿದಾಗ ಹೋರಾಟಗಾರರು ಗುತ್ತಿಗೆದಾರ ಬಂದು ಕೆಲಸ ಪ್ರಾರಂಭ ಮಾಡಿದಾಗಲೇ ಧರಣಿ ಕೈಬಿಡುತ್ತೇವೆ ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲಾ ಎಂದು ಹೇಳಿದಾಗ ಅಧಿಕಾರಿಗಳು ಗುತ್ತಿಗೆದಾರ ಮತ್ತು ಜಿಲ್ಲಾಧಿಕಾರಿಗಳ ಜೋತೆ ಚರ್ಚಿಸಿ ಬರತ್ತೇವೆ ಎಂದು ತೆರಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಹಿರಿಯ ನಾಯಕ ಮಲ್ಲಿನಾಥಗೌಡ ಪಾಟೀಲ ಯಲಗೋಡ, ಬಿಜೆಪಿ ಹಿರಿಯ ನಾಯಕಿ ಶೋಬಾ ಬಾಣಿ, ಮರೆಪ್ಪ ಬಡಿಗೇರ, ಶಿವಪುತ್ರಪ್ಪಾ ಮಸ್ಟರ, ಚಿತ್ತಾಪುರ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ವಿಠಲ ನಾಯಕ, ಗುರುರಾಜ ಸೂಲಹಳ್ಳಿ, ಜೆಡಿಎಸ್ ಮುಖಂಡ ದೇವಿಂದ್ರ ಜವಳಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಶಾಂತಗೌಡ ಪಾಟೀಲ ನರಿಬೋಳ, ಚನ್ನಯ್ಯಾ ಸ್ವಾಮಿ, ಆನಂದ ಇಂಗಳಗಿ, ಶರಣಗೌಡ ಪಾಟೀಲ ಚಾಮನೂರ, ಶರಣಗೌಡ ಪೋಲಿಸ್ ಪಾಟೀಲ ನರಿಬೋಳ, ರಾಘವೆಂದ್ರ ಕುಲಕರ್ಣಿ, ಶ್ರವಣ ಕುಲಕರ್ಣಿ, ಶಂಶಾಂಕ ಕುಲಕರ್ಣಿ , ಗುರುರಾಜ ಟಣಕೆದಾರ, ಗುಂಡುಗೌಡ ಪಾಟೀಲ ಚಾಮನೂರು, ಬಸವರಾಜ ಚಿನಗುಡಿ, ಭೀಮು ಖಾಖಂಡಗಿ, ನಿಂಗಣ್ಣ ಗಡ್ಡದ, ನಾಗಣಗೌಡ ಚಾಮನೂರ, ಚಿದಾನಂದ, ಬಸ್ಸಣ್ಣ ತೆಳಗೇರಿ, ನಿಂಗಣಗೌಡ, ಸುಬಾಷಚ್ಂದ್ರ, ಶಿವಶರಣಪ್ಪಾ ರೇಷ್ಮಿ, ಮಲ್ಲಣಗೌಡ ಮಾಲಿ ಪಾಟೀಲ ನರಿಬೋಳ, ಮಾಳಪ್ಪಾ ಮುಡಬೂಳ ಭೀಮು ನಾಯಕೋಡಿ, ಸಂಗಣ್ಣ ತೆಳಗೇರಿ, ದ್ಯಾವಪ್ಪಾ ತೆಳಗೇರಿ, ಭೀಮಣ್ಣ ಮಾಡಗಿ ಇನ್ನಿತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!