ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಚಿತ್ತಾಪುರ ಮುಖಂಡರಿಂದ ಸನ್ಮಾನ, ಜೀವನದ ಕೊನೆಯ ಉಸಿರು ಇರುವವರೆಗೂ ಜನಸೇವೆ ಮಾಡುವುದೇ ನನ್ನ ಗುರಿ: ಚಿಂಚನಸೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಸರ್ಕಾರದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಂಪುಟ ದರ್ಜೆ ಸಚಿವ ಸ್ಥಾನಮಾನದೊಂದಿಗೆ ನಾಮನಿರ್ದೇಶನಗೊಂಡ ಬಾಬುರಾವ್ ಚಿಂಚನಸೂರ ಅವರನ್ನು ಚಿತ್ತಾಪುರ ಕ್ಷೇತ್ರದ ಮುಖಂಡರು ಸನ್ಮಾನಿಸಿ ಶುಭಾಶಯಗಳು ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿಂಚನಸೂರ, ನನ್ನ ಕೊನೆಯ ಉಸಿರು ಇರುವವರೆಗೂ ಜನಸೇವೆ ಮಾಡುವುದೇ ನನ್ನ ಪ್ರಮುಖ ಗುರಿಯಾಗಿದೆ, ದಿನ ದಲಿತರಿಗೆ, ಬಡವರಿಗೆ ಕೈಲಾದ ಸಹಾಯ ಸಹಕಾರ ಮಾಡುವುದರ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಮುಖಂಡರಾದ ಅಶೋಕ ನಿಪ್ಪಾಣಿ, ಶಂಕರಗೌಡ ರಾವೂರಕರ್ ಲೀಡರ್, ಕಾಶಿನಾಥ ಗುತ್ತೇದಾರ, ಆನಂದ ಪೇಂಟರ್, ಲಖನಸಿಂಗ್ ರಜಪುತ್, ಯಲ್ಲಯ್ಯ ಕಲಾಲ್, ಬನ್ನೇಶ್ ಸುಲೇಗಾಂವ, ಭಾಗು ದೊರೆ, ಅನೀಲಕುಮಾರ ಮೊಗಲಾ ಸೇರಿದಂತೆ ಇತರರು ಇದ್ದರು.