Oplus_0

ಒಳ ಮೀಸಲಾತಿ ಕಾಲಾವಧಿ ವಿಸ್ತರಣೆಗೆ ರವಿ ಬೆಳಮಗಿ ತೀವ್ರ ಖಂಡನೆ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಒಳ ಮೀಸಲಾತಿ ಕಾಲಾವಧಿ ವಿಸ್ತರಣೆಗೆ ಮಾದಿಗ ಸಮಾಜದ ಯುವ ಮುಖಂಡ ರವಿ ಬೆಳಮಗಿ ಶಹಾಬಾದ ತೀವ್ರವಾಗಿ ಖಂಡಿಸಿದ್ದಾರೆ.

ನಿಖರ ದತ್ತಾಂಶ ಒಳಗೊಂಡ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ವರದಿ ಸಲ್ಲಿಕೆ ವಿಳಂಬದ ಅಳಕು ದಿನ ದಿನಕ್ಕೂ ಮಾದಿಗ ಸಂಬಂಧಿಸಿದ ಸಮುದಾಯಗಳನ್ನು ಬಾಧಿಸಲಾರಂಭಿಸಿದೆ ಪರಿಷ್ಟ ಜಾತಿ ಉಪಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 1 ಆಗಸ್ಟ್ 2024 ರಂದು ಆದೇಶಿಸಿದ ಬಳಿಕ ಮಾದಿಗ ಸಂಬಂಧಿಸಿದ ಜಾತಿಗಳಲ್ಲಿ ಹೊಸ ಆಶಯಗಳು ನಿಗುರಿತ್ತು ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ಸಂಘಟನೆಗಳು ಜನ ಪ್ರತಿನಿಧಿಗಳ ಒತ್ತಡಕ್ಕೆ ಮಾಡಿದ ಸರಕಾರ ಸುಪ್ರೀಂ ಕೋರ್ಟ್ ನ ಪ್ರಕಾರ ದತ್ತಾಂಶ ಸಂಗ್ರಹಿಸಿ ವರದಿ ಸಲ್ಲಿಸುವುದಕ್ಕೆ 12 ನವೆಂಬರ್ 2024ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ಎನ್ ನಾಗಮೋಹನದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರ ಮೂರು ತಿಂಗಳ ಒಳಗಡೆ ವರದಿ ಸಲ್ಲಿಸಲು ಗಡವು ನೀಡಲಾಗಿತ್ತು.

ಆಯೋಗವು ಜನವರಿಯಿಂದ ಕಾರ್ಯ ಆರಂಭಿಸಿದ್ದು ಫೆಬ್ರವರಿ ಅಂತ್ಯದವರೆಗೆ ಸರಕಾರದ ಗಡಿವಿನೋಳಗಡೆ ವರದಿ ಸರಕಾರಕ್ಕೆ ಸಲ್ಲಿಸಬೇಕು, ಆದರೆ ಆಯೋಗದ ಮುಖ್ಯಸ್ಥರಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸರವರು ವರದಿಯನ್ನು ಸರಕಾರ ನೀಡಿದ ಗಡುಗನೊಳಗಡೆ ಸಲ್ಲಿಸುವುದು ಆಗದಿದ್ದರೆ ಕಾಲವು ವಿಸ್ತರಿಸಲು ಸರಕಾರಕ್ಕೆ ಸಮಯ ಕೇಳಲಾಗುವುದು ಎಂದಿರುವುದು ರಾಜ್ಯದಲ್ಲಿರುವ ಮಾದಿಗ ಸಮುದಾಯ ಸಹಿಸಲಾರದು ಎಂದು ತಿಳಿಸಿದ್ದಾರೆ.

ವರದಿ ಅಂಗೀಕಾರಕ್ಕೆ ಸಮಯ ಬೇಕು ಎಂದು ಸರಕಾರಕ್ಕೆ ಒಂದು ವೇಳೆ ಆಯೋಗ ಕೇಳಿದರೆ ಏನಾಗಬಹುದು ಸರಕಾರವು ಇದಕ್ಕೆ ಸ್ಪಂದಿಸಿ ಒಂದು ತಿಂಗಳು ಗಡವು ನೀಡಿದರೆ ಅಷ್ಟರಲ್ಲಿ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಚುನಾವಣೆಯ ಆದೇಶ ಬಂದು ನೀತಿ ಸಂಹಿತೆ ಜಾರಿಯಾದರೆ ಮಾದಿಗ ಸಮುದಾಯದ 30 ವರ್ಷಗಳ ಹೋರಾಟದ ಕನಸು ಏನಾಗಬಹುದು ಕಾರಣ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಸರಕಾರದ ಗಡುವಿನ ಒಳಗಡೆ ವರದಿಯನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

ಮತ್ತು ವಿಶೇಷವಾಗಿ ತೆಲಂಗಾಣ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕ್ರಾಂತಿಕಾರಿ ಸಾಧನಗೈದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಸಮಾಜದ ಮೂರು ದಶಕಗಳ ಬೇಡಿಕೆಯಾದ ಎಬಿಸಿಡಿ ವರ್ಗೀಕರಣವನ್ನು ಸದನದಲ್ಲಿ ಒಪ್ಪಿಗೆ ಪಡೆದು ಎಸ್ಸಿಗಳಲ್ಲಿ ಬರುವ 59 ಜಾತಿಗಳಲ್ಲಿ ಮೂರು ವಿಭಾಗಗಳನ್ನು ಮಾಡಿ ಈ ಗುಂಪಿನಲ್ಲಿ ಬರುವ ಸಂಚಾರ ಜಾತಿ 15 ಉಪಜಾತಿಗಳಿಗೆ ಶೇಕಡ 1 ಹಾಗೂ ಬಿ ಗುಂಪಿನಲ್ಲಿ ಬರುವ 18 ಉಪಜಾತಿಗಳಿಗೆ (ಮಾದಿಗರು) ಶೇ.9, ಸಿ. ಗುಂಪಿನಲ್ಲಿ ಬರುವ (ಮಾಲಾ) ಶೇ.5, ಈ ರೀತಿಯಾಗಿ ಹಂಚಿಕೆ ಮಾಡಿ ಭಾರತದ ಇತಿಹಾಸದಲ್ಲಿ 4 ಫೆಬ್ರುವರಿ 2025 ದಿನ ಚರಿತ್ರೆಯಲ್ಲಿ ಉಳಿಯುವಂತೆ ಮಾಡಿದ ತೆಲಂಗಾಣದ ಮುಖ್ಯಮಂತ್ರಿಗಳಿಗೆ ಹಾಗೂ ಮಂದಕೃಷ್ಣ ಮಾದಿಗ ಅವರಿಗೆ ಡಿಎಂಎಸ್ ಸಂಘಟನೆ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!