Oplus_0

ಓರಿಯಂಟ್ ಸಿಮೆಂಟ್ ಕಂಪೆನಿಗೆ ನುಗ್ಗಿದ ಮಳೆ ನೀರು ಅಪಾರ ಹಾನಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಚಿತ್ತಾಪುರ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿರುವುದು ಒಂದೆಡೆಯಾದರೆ ಇನ್ನೊಂದೆಡೆ ಪಟ್ಟಣದ ಸಮೀಪವಿರುವ ಓರಿಯಂಟ್ ಸಿಮೆಂಟ್ ಕಂಪೆನಿಯಲ್ಲಿ ಮಳೆ ನುಗ್ಗಿ ಅಪಾರ ಹಾನಿಯಾದ ಮಾಹಿತಿ ತಿಳಿದುಬಂದಿದೆ.

ಓರಿಯಂಟ್ ಸಿಮೆಂಟ್ ಕಂಪೆನಿಗೆ ಸಂಬಂಧಿಸಿದ ಕ್ರಶರ್ ಬೆಲ್ಟ್ ಕನ್ವೇಯರ ಟನಲ್, ಕ್ರಶರ್ ಟನಲ್, ಮೈನ್ಸ್ ಬ್ರಿಜ್, ಮೈನ್ಸ್ ರೋಡ್, ಮೈನ್ಸ್ ಗ್ಯಾರೇಜ್ ಆಫೀಸ್, ಮೈನ್ಸ್ ಗ್ಯಾರೇಜ್ ಗಳಲ್ಲಿ ಮಳೆ ನೀರು ನುಗ್ಗಿ ಹಾನಿಯಾಗಿರುವುದು ಕಂಡುಬಂದಿದೆ. ಮಳೆ ನೀರು ನುಗ್ಗಿದ್ದರಿಂದ ಮಷನರಿಗಳು ಕೆಟ್ಟು ಹೋಗಿವೆ ಎಂದು ಕಂಪನಿಯ ಅಧಿಕಾರಿ ತಿರುಪತಿ ಚವ್ಹಾಣ ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!