Oplus_0

ಓರಿಯಂಟ್ ಸಿಮೆಂಟ್ ಕಂಪೆನಿ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ, ಮಾರ್ಗ ಮಧ್ಯದಲ್ಲಿ ಹೋರಾಟ ತಡೆಹಿಡಿದ ಪೊಲೀಸರು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಬಿಜೆಪಿ ಮುಖಂಡರ ಲಾರಿ ನಂಬರ ಕೆಎ-32, ಎಬಿ-2200 ವಾಹನವನ್ನು ಓರಿಯಂಟ್ ಸಿಮೆಂಟ್ ಕಂಪನಿಯವರು ಲೋಡಿಂಗ್ ಮಾಡದೆ ವಿನಾಕಾರಣ ಕಿರುಕುಳ ನೀಡುತ್ತಿರುವ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿತ್ತಾಪುರ ಬಿಜೆಪಿ ಮಂಡಲ ನೇತೃತ್ವದಲ್ಲಿ ಮುಖಂಡರು ಗುರುವಾರ ಕಂಪೆನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಕಂಪೆನಿ ಗೇಟ್ ಮುಂದೆ ಹೋರಾಟ ಮಾಡಲು ಹೊರಟ್ಟಿದ್ದ ಬಿಜೆಪಿ ಮುಖಂಡರನ್ನು ಪೆಟ್ರೋಲ್ ಬಂಕ್ ಹತ್ತಿರ ಪೊಲೀಸ್ ಅಧಿಕಾರಿಗಳು ತಡೆಹಿಡಿದರು ಈ ಮಧ್ಯೆ ಮುಖಂಡರ ಹಾಗೂ ಪೊಲೀಸರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಆಗಮಿಸಿ ಸಿಪಿಐ ಕಚೇರಿಯ ನಕಲಿ ಪತ್ರದ ಕುರಿತು ಒಂದು ವಾರ ಕಾಲಾವಕಾಶ ನೀಡಿ ತನಿಖೆ ಕೈಗೊಳ್ಳಲಾಗುವುದು ಎಂದು ಹೋರಾಟಗಾರರ ಮನವೊಲಿಸಿದರು, ನಂತರ ಮುಖಂಡರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ನಮ್ಮ ಪಕ್ಷದ ಮುಖಂಡರ ಲಾರಿ ವಾಹನ ಸಂಖ್ಯೆ ಕೆಎ-32, ಎಬಿ-2200 ವಾಹನದ ಲೋಡಿಂಗ್ ಅನ್ ಲೋಡಿಂಗ್ ಮಾಡದೆ ವಿನಾಕಾರಣ ಸದರಿ ಮುಖಂಡನ ವಾಹನವನ್ನು ಕಂಪನಿಯಲ್ಲಿ ನಡೆಯದಂತೆ ತಕರಾರು ಮಾಡುತ್ತಿದ್ದಾರೆ. ಆದರೆ ಇವರ ವಾಹನ ಬಿಟ್ಟು ಇತರೆ ವಾಹನಗಳು ಕಂಪನಿಯಲ್ಲಿ ನಡೆಯುತ್ತಿವೆ. ಸದರಿ ವಿಷಯದಲ್ಲಿ ಪೊಲೀಸರ ಯಾವುದೇ ಅಧಿಕಾರ ಇಲ್ಲದಿದ್ದರೂ ಪೊಲೀಸ್ ಇಲಾಖೆಯ ಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದರಿ ಲಾರಿಗಳನ್ನು ಬ್ಲಾಕ್ ಮಾಡುವ ಅಧಿಕಾರ ಆ‌ರ್.ಟಿ.ಓ ಇಲಾಖೆಯವರಿಗೆ ಇರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಈ ರೀತಿ ಕಂಪನಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕಾರಣ ಸದರಿ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಾಹನ ಸಂಖ್ಯೆ KA-32, AB-2200 ಸದರಿ ಲಾರಿಯನ್ನು ಯಾವುದೇ ಲೋಡಿಂಗ್, ಅನ್ ಲೋಡಿಂಗ್ ಮಾಡಲು ತಕರಾರು ಮಾಡಬಾರದು, ಈ ಒಂದು ವಿಷಯದಲ್ಲಿ ವಿನಾಕಾರಣ ಕಿರುಕುಳ ನೀಡುತ್ತಿರುವ ಲೈಜನಿಂಗ ಮತ್ತು ಹೆಚ್.ಆರ್. ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಕಂಪನಿಯಲ್ಲಿ ರಾಜಕೀಯ ಬೇರೆಸಬಾರದು, ಮುಂದಿನ ದಿನಗಳಲ್ಲಿ ಯಾವ ಲಾರಿ ಮಾಲಿಕರಿಗೂ ವಿನಾಕಾರಣ ಕಿರುಕುಳ ನೀಡಬಾರದು, ವೃತ್ತ ನಿರೀಕ್ಷಕರು ಚಿತ್ತಾಪುರ ಇವರಿಗೆ ಕಳುಹಿಸಿರುವವರ, ಪತ್ರ ಬರೆದಿರುವವರ ಮೇಲೆ ಸೂಕ್ತವಾದ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಮನವಿ ಪತ್ರವನ್ನು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ,  ಮುಖಂಡರಾದ ಅಶ್ವಥ್ ರಾಠೋಡ, ದೀಪಕ್ ಹೊಸ್ಸುರಕರ್, ಶ್ಯಾಮ್ ಮೇಧಾ ಪಂಕಜ್ ಗೌಡ್, ಪ್ರಭು ಗಂಗಾಣಿ, ಶಾಂತಕುಮಾರ್ ಮಳಖೇಡ, ದೇವರಾಜ್ ತಳವಾರ, ಉದಯಕುಮಾರ್ ಸಿಂಪಿ, ಮಲ್ಲಿಕಾರ್ಜುನ ಅಲ್ಲೂರಕರ್, ಶರಣು ತೊನಸನಳ್ಳಿ, ಮಹ್ಮದ್ ಯುನುಸ್, ಶಿವರಾಮ್ ಚವ್ಹಾಣ, ಗೂಳಿ ಡಿಗ್ಗಿ, ಸಂಜು ರಾಠೋಡ, ವಿನೋದ ಚವ್ಹಾಣ, ರಾಜು ರಾಠೋಡ, ಸಂಗು ಯರಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿಪಿಐ ಗಳಾದ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಪಿಎಸ್ಐ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

“ಓರಿಯಂಟ್ ಸಿಮೆಂಟ್ ಕಂಪೆನಿ ವಿರುದ್ಧ ಕೈಗೊಂಡ ಪ್ರತಿಭಟನೆ ಪೊಲೀಸ್ ಅಧಿಕಾರಿಗಳ ಹಾಗೂ ತಹಸೀಲ್ದಾರ್ ಅವರ ಭರವಸೆ ಮೇಲೆ ಕೈಬಿಟ್ಟಿದ್ದು ಒಂದು ವಾರದೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು”.-ಮಲ್ಲಿಕಾರ್ಜುನ ಎಮ್ಮೆನೋರ್ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರು.

Spread the love

Leave a Reply

Your email address will not be published. Required fields are marked *

You missed

error: Content is protected !!