ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಕಾಳಗಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಕಾಳಗಿಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-1 ತಹಸೀಲ್ದಾರ್ ಘಮಾವತಿ ರಾಠೋಡ ಅವರಿಗೆ ಸಲ್ಲಿಸಿದರು.
ಈ ವೇಳೆ ಕಾಳಗಿ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕು ಅಧ್ಯಕ್ಷ ವೀರಣ್ಣಾ ಗಂಗಾಣಿ ಮಾತನಾಡಿ, ಭಾರತದ ಮುಕುಟಮಣಿ ಎನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿರುವ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ, ಯಾವುದೇ ತಪ್ಪೆಸೆಗದವರ ಮೇಲೆ ಏಕಾಏಕಿ ಗುಂಡಿಟ್ಟು ಹತ್ಯೆ ಮಾಡಿರುವುದು ಖಂಡನೀಯ, ಇದಕ್ಕೆ ಕಾರಣರಾದ ಯಾರನ್ನೂ ಬಿಡದೆ ಸರ್ಕಾರ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್ ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಜನರನ್ಮು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಪಾಪಕೃತ್ಯ ಯಾವುದೇ ನಾಗರಿಕರು ಒಪ್ಪುವಂಥದ್ದಲ್ಲ. ಜೀವ ಕಳೆದುಕೊಂಡವರಿಗೆ ಚಿರಶಾಂತಿ ಲಭಿಸಲಿ, ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಹಿಂದೂ ಕಾರ್ಯಕರ್ತರಾದ ಜಗದೀಶ ಮಾಲಿಪಾಟೀಲ, ನಾಗರಾಜ ಚಿಕ್ಕಮಠ, ಶಿವರಾಜ ಚೆಂಗಟಿ, ಸುಂದರ ಡಿ. ಸಾಗರ, ವೀರಸಂಗಪ್ಪ ಯಲ್ಲಮಡಗಿ, ಕರಣ ರಾಜಾಪೂರ, ಶರಣಪ್ಪ ಮುಕರಂಬಿ, ರೇವಣಸಿದ್ದಪ್ಪ ಕಲಶೆಟ್ಟಿ ವಿಜಯಕುಮಾರ್ ಸುಂಠಾಣ, ಭದ್ರಪ್ಪ ಸಲಗೂರ, ಶಿವಕಿರಣ ಪ್ಯಾಟಿಮಠ, ಕಾಳು ಪಡಶೆಟ್ಟಿ, ಗಣೇಶ ಸಿಂಗಶೆಟ್ಟಿ, ಹಣಮಂತ ಕಣ್ಣಿ, ಕಲ್ಯಾಣಿ ರೇವಣಸಿದ್ದಪ್ಪ, ಸದಾಶಿವ ವಾಗನ್ನಡೆ ನಿಪ್ಪಾಣಿ ಇನ್ನಿತರರು ಇದ್ದರು.