ಪಹಲ್ಗಾಮ್ ಉಗ್ರರ ದಾಳಿ, ಮುಸ್ಲಿಂ ಲೀಗ್ ನ ವಕ್ತಾರರಂತೆ ಮಾತನಾಡುತ್ತಿರುವ ಕಾಂಗ್ರೆಸ್: ಹಣಮಂತ ಇಟಗಿ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪಹಲ್ಗಾಮ್ ನರಮೇಧ ಮಾಡಿದ ಇಸ್ಲಾಮಿಕ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮುಸ್ಲಿಮ್ ಲೀಗ್ ಪಕ್ಷದ ವಕ್ತಾರರಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬುದು ದೃಡವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರರಾದ ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಹಲ್ಗಾಮ್ ದಾಳಿ ಕೇವಲ 26 ಜನರ ಹತ್ಯೆ ಮಾಡಿದ ಘಟನೆಯಲ್ಲ, ಇಡೀ ದೇಶದ ಮೇಲೆ ಮಾಡಿದ ಉಗ್ರ ದಾಳಿಯಾಗಿದೆ, ಆದರೆ ಕಾಂಗ್ರೆಸ್ ಪಾಕಿಸ್ತಾನದ ಪರವಾಗಿ ತಮ್ಮ ನಿಲುವನ್ನು ಪ್ರಕಟಿಸಿ ಪಾಕಿಸ್ತಾನಕ್ಕೆ ತಮ್ಮ ಬೆಂಬಲ ಸೂಚಿಸಿ ದೇಶವಿರೋಧಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರೆ ಸಿದ್ದರಾಮಯ್ಯ ಯುದ್ಧ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿ ದೇಶದ ಜನತೆಗೆ ಅವಮಾನ ಮಾಡಿದ್ದಾರೆ ಹಾಗೂ ಸಚಿವ ಆರ್.ಬಿ ತಿಮ್ಮಾಪುರ ಯಾರೂ ಧರ್ಮ ಕೇಳಿ ಕೊಲೆ ಮಾಡಿಲ್ಲ ಎಂದು ಬಾಲಿಷತನ ಹೇಳಿಕೆ ನೀಡಿ ದಾಳಿಯಲ್ಲಿ ಪ್ರಾಣ ಕಳೆದು ಕೊಂಡ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಧರ್ಮ ಕೇಳಿ ಕೊಲೆ ಮಾಡಿದ್ದಾರೆ, ಸ್ವತಃ ಪತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳೇ ಪ್ಯಾಂಟ್ ಬಿಚ್ಚಿ ‘ಮಂಡತ್ವ’ ಪರಿಶೀಲನೆ ಮಾಡಿ ಗುಂಡು ಹೊಡೆದಿದ್ದಾರೆ ಎಂದು ಹೇಳಿದರೂ ಇದನ್ನು ಸುಳ್ಳು ಎಂದು ಕಾಂಗ್ರೆಸ್ ನವರು ಬಿಂಬಿಸಲು ಹೊರಟಿದ್ದಾರೆ. ಬಿ.ಕೆ ಹರಿಪ್ರಸಾದ್ ಅಂತೂ ಪಾಕಿಸ್ತಾನ ನಮ್ಮ ವಿರೋಧಿಗಳಲ್ಲ ಎಂದು ಹೇಳಿಕೆ ನೀಡಿ ಪ್ರಾಣ ಕಳೆದುಕೊಂಡವರಿಗೆ ಅಪಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಸಿದ್ದರಾಮಯ್ಯನವರು ರಾಜ್ಯ ಮಟ್ಟದ ಅಧಿಕಾರಿಗಳನ್ನು ಬಹಿರಂಗವಾಗಿ ಬೆದರಿಸುವುದು, ಹಲ್ಲೆ ಮಾಡಲು ಕೈ ಎತ್ತುವುದು ಮಾಡುತ್ತಿದ್ದಾರೆ. ಇದು ಹತಾಶೆಗೆ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕ ಸಭೆಯಲ್ಲಿ ಹಿಂದೆ ವೇದಿಕೆಮೇಲೆ ಒಬ್ಬ ಜಿಲ್ಲಾಧಿಕಾರಿಯನ್ನು ನಿಂದಿಸಿದರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಒಬ್ಬ ಡಿವೈಎಸ್‌ಪಿ ಯನ್ನು ಹೊಡೆಯುವ ಮಟ್ಟಕ್ಕೆ ಸಿದ್ದರಾಮಯ್ಯ ನವರು ಹೋಗಿದ್ದು ದುರಾದುಷ್ಟಾಕರ ಸಂಗತಿಯಾಗಿದ್ದು, ಅಧಿಕಾರಿಯ ಮೇಲೆ ಕೈ ಮಾಡುವ ಅಧಿಕಾರ ಇವರಿಗೆ ಯಾರು ಕೊಟ್ಟಿದ್ದು ರಾಜ್ಯದ ಮುಖ್ಯಮಂತ್ರಿ ಸರ್ಕಾರಿ ನೌಕರರಿಗೆ ಕ್ಷಮೆ ಯಾಚಿಸಬೇಕೆಂದು ಅಗ್ರಹಿಸಿದ್ದು, ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಗೆ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.