ಚಿತ್ತಾಪುರ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಲಂಬಾಣಿ ಎಂದು ಬರೆಯಿಸಿಲು ಬಂಜಾರ ಸಮಾಜ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬ ಭಾಗವಹಿಸುವ ಮೂಲಕ ಲಂಬಾಣಿ ಎಂದು ಬರೆಯಿಸಿಬೇಕು ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ತಾಲೂಕು ಯುವ ಅಧ್ಯಕ್ಷ ಜಗದೀಶ ಚವ್ಹಾಣ ಅವರು ಮನವಿ ಮಾಡಿದ್ದಾರೆ.
1 ಜುಲೈ 2024 ರಂದು ಸುಪ್ರೀಂ ಕೋರ್ಟ್ ತೀರ್ಪಿನಂತೆ, ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಡಾ. ಹೆಚ್.ಎನ್.ನಾಗಮೋಹನದಾಸ್ ಏಕೆ ಸದಸ್ಯ ವಿಚಾರಣೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮೇ.5 ರಿಂದ ಮೇ.17 ರವರೆಗೆ ನಡೆಯಲಿದೆ ಆದ್ದರಿಂದ ಲಂಬಾಣಿ ಸಮಾಜದ ಎಲ್ಲರೂ ತಪ್ಪದೇ ಭಾಗವಹಿಸಿ ಲಂಬಾಣಿ ಎಂದು ಬರೆಯಿಸಿಬೇಕು ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮೀಕ್ಷೆ ಮಾಡಲು ಗಣತಿದಾರರು ಪ್ರತಿ, ತಾಂಡಾ, ನಗರ, ಕಾಲೋನಿ, ಬಡಾವಣೆಗಳಲ್ಲಿರುವ ಪರಿಶಿಷ್ಟ ಜಾತಿ (ಎಸ್.ಸಿ) ಜನಾಂಗದವರ ಮನೆ ಮನೆಗೆ ಬರುತ್ತಾರೆ ಆಗ ನಿಖರವಾದ ಮಾಹಿತಿ ಬರೆಸಬೇಕು ಈ ನಿಟ್ಟಿನಲ್ಲಿ ಹೊಟ್ಟೆ ಪಾಡಿಗಾಗಿ ದೂರದ ಬಾಂಬೆ, ಪುನ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಇತರೆ ನಗರಗಳಿಗೆ ವಲಸೆ ಹೋದ ಲಂಬಾಣಿಗರು ದಯವಿಟ್ಟು ಸಮೀಕ್ಷೆ ಅವಧಿಯಲ್ಲಿ ಆಗಮಿಸಿ ಮಾಹಿತಿ ನೀಡಿ ಸ್ಪಷ್ಟವಾಗಿ ಲಂಬಾಣಿ ಎಂದು ಬರೆಸಬೇಕು ಎಂದು ತಿಳಿಸಿದ್ದಾರೆ.
ನಮ್ಮ ಎಸ್ .ಸಿ ಲಂಬಾಣಿ ಜನಾಂಗದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕ- ಯುವತಿಯರು, ಕಾರ್ಮಿಕರು ಇತ್ಯಾದಿ ತಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನಮ್ಮ ಸಮುದಾಯದವರು ಭಾರತ ನಿರ್ಮಾಣ ಕಾರ್ಯದಲ್ಲಿ ತಮ್ಮದೇ ಆದ ಹಲವಾರು ಕೊಡುಗೆ ನೀಡಿದ್ದಾರೆ ಇಂತಹ ಮಹಾನ್ ದೇಶಪ್ರೇಮಿಗಳು ನಮ್ಮ ಸಮಾಜದವರು ಆದ್ದರಿಂದ, ಜಾತಿಗಣತಿ ಮಾಡುವ ಸಂಧರ್ಭದಲ್ಲಿ ಜಾತಿಯ ಕಲಂನಲ್ಲಿ ಲಂಬಾಣಿ ಎಂದೇ ಬರೆಯಿಸಿಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮ ಲಂಬಾಣಿ ಸಮುದಾಯದವರು ಜಾತಿ ಪ್ರಮಾಣಪತ್ರದಲ್ಲಿ ನಮೂದಿಸಿದಂತೆ ಲಂಬಾಣಿ ಸಮಾಜದ ವಿದ್ಯಾವಂತರು ತಮ್ಮ ಮನೆಯ, ಊರು, ನಗರ, ತಾಂಡಾ, ಬಡಾವಣೆಗಳಲ್ಲಿರುವ ಮತ್ತು ಇತರರಿಗೂ ಜಾಗೃತಿ ಮೂಡಿಸಿ ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಜಾತಿ ಗಣತಿಯ ಸಂದರ್ಭದಲ್ಲಿ ಕಡ್ಡಾಯವಾಗಿ ಲಂಬಾಣಿ ಎಂದು ನಮೂದಿಸಿ ಎಂದು ಕೋರಿದ್ದಾರೆ.
ಆದ್ದರಿಂದ ನಮ್ಮ ಸಮಾಜದ ಬಂಧುಗಳು ಜಾತಿಯ ಗಣತಿಯ ಸಮಯದಲ್ಲಿ ತಾವು ಎಲ್ಲೆ ಇದ್ದರೂ ಸಹಿತ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆ ದಿನ ಕಡ್ಡಾಯವಾಗಿ ಜಾತಿ ಗಣತಿಯಲ್ಲಿ ಲಂಬಾಣಿ ಬರೆಯಿಸಿ ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ, ಇಂತಹ ಸಂದರ್ಭಗಳಲ್ಲಿ ನಾವು ನಿರ್ಲಕ್ಷ್ಯ ಮಾಡಿದ್ದರೆ ಜಾತಿಗಣತಿಯಲ್ಲಿ ನಮ್ಮ ಜನಸಂಖ್ಯೆಯು ಕಡಿಮೆಯಾದರೆ ನಮಗೆ ಸಿಗುವ ಮೀಸಲಾತಿಯು ಕಡಿಮೆಯಾಗಿ ನಮ್ಮ ಉನ್ನತ ಮಟ್ಟದ ಶಿಕ್ಷಣದ ಆಸೆ ಆಕಾಂಕ್ಷೆಗಳು ಜೊತೆಗೆ ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳು, ಶಿಕ್ಷಕರು, ಪೊಲೀಸ್, ಸಿಪಾಯಿ ಇತ್ಯಾದಿಗಳು ಕನಸಿನ ಮಾತೆ ಸರಿ ಇದರ ಪರಿಣಾಮವಾಗಿ ನಾವು ಅಭಿವೃದ್ದಿಯಲ್ಲಿ ಮತ್ತೆ ಒಂದು ನೂರು ವರ್ಷ ಹಿಂದೆ ಹೋಗುತ್ತೇವೆ.
ಸಮುದಾಯದ ಅಧೀನದಲ್ಲಿ ನಾವು ಹಲವಾರು ಶೋಷಣೆಗಳಿಗೆ ಒಳಗಾಗಿ ನಮ್ಮ ಮಕ್ಕಳು ಕೂಲಿ ಕೆಲಸ ಅವರ ಒತ್ತಡ ದೌರ್ಜನ್ಯ ಅಧೀನದಲ್ಲಿ ಜೀವಿಸಬೇಕಾಗುತ್ತದೆ ಅದರ ಕಷ್ಟ ನಮ್ಮ ಹಿರಿಯರು ಅನುಭವಿಸಿದ್ದು ಸಾಕು, ಇದು ನಮ್ಮ ಮಕ್ಕಳು ಅನುಭವಿಸುವುದು ಬೇಡ, ನಮ್ಮ ಸಮಾಜದ ಪ್ರತಿಯೊಬ್ಬ ಸ್ವಾಭಿಮಾನಿ ಲಂಬಾಣಿ ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ.