ಪೆದ್ದು ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವ ಅಂಗವಾಗಿ ಜ್ಞಾನಜ್ಯೋತಿ ಪ್ರವಚನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸಿದ್ಧವೀರೇಶ್ವರ ಪೆದ್ದು ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವ ಅಂಗವಾಗಿ ಜ್ಞಾನಜ್ಯೋತಿ ಪ್ರವಚನ ಶ್ರೀಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಪಂಚಗೃಹ ಹಿರೇಮಠ ದಿಗ್ಗಾಂವ ನಾಗಾವಿ ಗುರುಗಳ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ, ಗಂಗಾಧರಯ್ಯ ಸ್ವಾಮಿ ಹಿರೇಮಠ, ಶ್ರೀ ಬಸಯ್ಯಸ್ವಾಮಿ ಸಾತನೂರು, ಚಂದ್ರಪ್ರಕಾಶ್ ತಿರುಮಲ್, ಶರಣಗೌಡ ಪಾಟೀಲ ಮರಗೋಳ, ಬನ್ನಯ ಸ್ವಾಮಿ ರಾಜೋಳಾ, ಮಲ್ಲಿಕಾರ್ಜುನ ಕೋಟಿಗೆ ಬೆನಕನಹಳ್ಳಿ, ದೊಳಪ್ಪ ಅವಂಟಿ ಕೊಡ್ಲಾ, ಉಮೇಶ್ ಸಾಸಬಾಳ ದಿಗ್ಗಾಂವ, ದೇವೇಂದ್ರಪ್ಪ ಸಜ್ಜನ್, ದೇವೇಂದ್ರಪ್ಪ ಶಹಾಬಾದ್ ಸೇರಿದಂತೆ ಇತರರು ಇದ್ದರು.
ಆದಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಕಾರ್ಯವನ್ನು ಮಲ್ಲಣ್ಣ ಮಾಡಿಗಿ, ಪ್ರತಿನಿತ್ಯ ಮಧ್ಯಾಹ್ನ ಪೂಜ್ಯ ಗುರುಗಳಿಗೂ ಸಂಗೀತ ಬಳಗಕ್ಕೂ ಪ್ರಸಾದ ಸುಭಾಷ್ ಸರಡಗಿ ಚಿತ್ತಾಪುರ ದಾಸೋಹದ ಸಭಕ್ತರು ಕಾಶಣ್ಣ ಸುಂತನಪುರ ಚಿತ್ತಾಪುರ ಅವರು ಮಾಡಿದರು. ನಾಗಭೂಷಣ ಸ್ವಾಮಿ ಹಿರೇಮಠ ದಿಗ್ಗಾಂವ ಸ್ವಾಗತಿಸಿದರು, ಶರಣು ಉಡುಗಿ ನಿರೂಪಿಸಿದರು. ನಂತರ ಪೂಜ್ಯರ ಆಶೀರ್ವಚನದೊಂದಿಗೆ ಮಹಾಮಂಗಳವಾಯಿತು.

