ಚಿತ್ತಾಪುರ ಪ್ರಗತಿಪರ ರೈತ ಮೌನೇಶ್ ಭಂಕಲಗಿ ಅವರಿಗೆ ರಾಜ್ಯ ಮಟ್ಟದ ಬಂಗಾರದ ಮನುಷ್ಯ ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಫಿಲಂ ಚೇಂಬರ್ ಸಂಸ್ಥೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೃಷಿಯಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ ಭಂಕಲಗಿ ಗ್ರಾಮದ ಪ್ರಗತಿಪರ ಯುವ ರೈತ ಮೌನೇಶ್ ಭಂಕಲಗಿ ಅವರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ರವೀಂದ್ರ ಸೇರಿದಂತೆ ಇತರೆ ಗಣ್ಯರು ರಾಜ್ಯ ಮಟ್ಟದ ಬಂಗಾರದ ಮನುಷ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕನ್ನಡ ಫಿಲಂ ಚೇಂಬರ್ ಸಂಸ್ಥೆಯ ವತಿಯಿಂದ ಸಮಾಜದಲ್ಲಿ ತಮ್ಮದೇ ಆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಕಲಾವಿದರ ಆರಾಧ್ಯ ದೈವ, ಪದ್ಮಭೂಷಣ, ಅಭಿಮಾನಿಗಳ ಪಾಲಿಗೆ ಅಣ್ಣಾವು ವರನಟ ಡಾ. ರಾಜಕುಮಾರ್ ರವರ ಸ್ಪೂರ್ತಿಯೊಂದಿಗೆ ರಾಜ್ಯ ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಮೌನೇಶ್ ಭಂಕಲಗಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ. ಎನ್.ಎನ್.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ.ಎನ್, ಖಜಾಂಚಿ ಡಾ. ರಾಘವ್ ದಾನಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.