Oplus_0

ಪ್ರಿಯಾಂಕ್ ಖರ್ಗೆ ಒಬ್ಬ ಪ್ರಬುದ್ಧ ರಾಜಕಾರಣಿ, ಬಿಜೆಪಿಯವರ ಷಡ್ಯಂತ್ರ ಫಲಿಸದು: ಓಂಕಾರೇಶ್ವರ ರೇಷ್ಮಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ-ಬಿ.ಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಒಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಬಿಜೆಪಿಯವರು ನಮ್ಮ ನಾಯಕರ ಮೇಲೆ ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಫಲಿಸದು ಎಂದು ಕಾಂಗ್ರೆಸ್ ಮುಖಂಡ ಓಂಕಾರೇಶ್ವರ ರೇಷ್ಮಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಿಜೆಪಿಯವರು ಗುತ್ತಿಗೇದಾರ ಸಚಿನ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಎಳೆದು ತರುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನಮ್ಮ ಪ್ರಿಯಾಂಕ್ ಖರ್ಗೆಯವರಿಗೂ ಯಾವುದೇ ಸಂಭಂದವಿಲ್ಲದಿದ್ದರೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದರು.

ಲಕ್ಷಾಂತರ ಅಭಿಮಾನಿಗಳನ್ನು ಹಾಗೂ ಆಪ್ತರನ್ನು ಪ್ರಿಯಾಂಕ್ ಖರ್ಗೆಯವರು ಹೊಂದಿದ್ದಾರೆ. ಆಪ್ತರ ವಯಕ್ತಿಕ ವಿಚಾರಗಳನ್ನು ಸಚಿವರ ಮೇಲೆ ಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯದು. ಈ ವಿಚಾರವನ್ನು ಪ್ರಜ್ಞಾವoತ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಜೆಪಿಯವರು ನಮ್ಮ ನಾಯಕರ ಮೇಲೆ ಆರೋಪ ಮಾಡುವ ಮುನ್ನ ಮೊದಲು ಸರಿಯಾಗಿ ತಿಳಿಕೊಂಡು ಹೋಮ್ ವರ್ಕ್ ಮಾಡಿಕೊಂಡು ಮಾತನಾಡಲಿ ಎಂದರು.

ಪ್ರಕರಣದ ಪಾರದರ್ಶಕ ತನಿಖೆಗಾಗಿ ಪ್ರಿಯಾಂಕ್ ಖರ್ಗಯವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಿಐಡಿಗೆ ವಹಿಸಿ ನಿಷ್ಪಕ್ಷ ತನಿಖೆ ಕೈಗೊಳ್ಳುವಂತೆ ಹೇಳಿದ್ದಾರೆ. ಇದರಿಂದ ಇಷ್ಟರಲ್ಲೇ ಸತ್ಯ ಹೊರ ಬರಲಿದೆ ಅಲ್ಲಿವರೆಗೆ ಕಾಯಿರಿ ವಿನಾಕಾರಣ ಸಚಿವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!