Oplus_0

ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಮಹಾಂತಪ್ಪ ಸಂಗಾವಿ

ನಾಗಾವಿ ಎಕ್ಸಪ್ರೆಸ್

ಕಲಬುರ್ಗಿ: ಗುತ್ತಿಗೆದಾರ‌ ಸಚಿನ್ ಪಂಚಾಳ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ಹೇಳಿದ್ದಾರೆ.

ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೇಳಿಕೆ ನೀಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೂ ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಅವರ ಪಾತ್ರ ಏನು ಇಲ್ಲ ಎನ್ನುವುದು ವಿಪಕ್ಷಗಳಿಗೂ ಗೊತ್ತಿದೆ. ಆದರೂ ಕೂಡ ಪ್ರಿಯಾಂಕ್ ಖರ್ಗೆ ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಹುನ್ನಾರದಿಂದ ರಾಜೀನಾಮೆಗೆ ಆಗ್ರಹಿಸಿತ್ತಿರುವುದು ನೋಡಿದರೆ ವಿಪಕ್ಷಗಳ ನೈತಿಕ ದಿವಾಳಿತನ ಎದ್ದು ಕಾಣಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನೂ ಈ ಪ್ರಕರಣದಲ್ಲಿ ಯಾರೇ ಆಗಿದ್ದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ಪ್ರಕರಣ ದಾಖಾಲಾಗಿದ್ದು ತನಿಖೆಯಾಗಿ ಸತ್ಯಾಂಶ ಹೊರ ಬರುವ ತನಕ ವಿಪಕ್ಷಗಳ ಮುಖಂಡರು ತಾಳ್ಮೆ ವಹಿಸಬೇಕು ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!