ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪಿಸಿ ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ: ನಂದಾ ರೆಡ್ಡಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಬಿಜೆಪಿ ಮುಖಂಡರು ಪ್ರಸ್ತಾಪ ಮಾಡಿ ಅವರ ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ ಎಂದು ನಾಲವಾರ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಂದಾ ರೆಡ್ಡಿ ತರಕಸಪೇಟ್ ತಿಳಿಸಿದ್ದಾರೆ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ರಾಜು ಕಪನೂರ್ ಅಂತಹವರು ನೂರಾರು ಜನ ಇದ್ದಾರೆ. ಅದಕ್ಕೆಲ್ಲ ಖರ್ಗೆ ಅವರೇ ಹೊಣೆ ಹೇಗೆ ಆಗುತ್ತಾರೆ? ತಪ್ಪಿತಸ್ಥರಿಗೆ ಶಿಕ್ಷೆ ಆಗಲು ಪ್ರಿಯಾಂಕ್ ಖರ್ಗೆ ಅವರು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರವರನ್ನು ಯಾಕೆ ಎಳೆದು ತರುತ್ತಿದ್ದಾರೆ? ಅವರು ನೇರ ದಿಟ್ಟ ನುಡಿಯ ನಾಯಕ ಅಂತನ? ಅಥವಾ ಬಿಜೆಪಿ ಮುಖಂಡರಿಗೆ ಮುಖಕ್ಕೆ ಹೊಡೆಯುವ ಹಾಗೆ ಮಾತಾಡ್ತಾರೆ ಅಂತಾನಾ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ನ ಎಲ್ಲಾ ನಾಯಕರ ಮೇಲೆ ಆರೋಪ ಬಂದಿದೆ. ಹಲವಾರು ಜನರ ಸಾವಿಗೆ ರಾಜಕೀಯ ನಾಯಕರ ಹೆಸರುಗಳು ಉಲ್ಲೇಖವಾಗಿದ್ದು ನಿಜ, ಆದರೆ ಯಾರನ್ನು ದೋಷಿಸಿಲ್ಲ. ಕಾರಣ ಸಾಕ್ಷಿ ಇಲ್ಲ ಆದರೆ ಈಗ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಎಳೆದು ತಂದಿದ್ದು ತಪ್ಪು ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷದ ಹಲವಾರು ನಾಯಕರು ಬಡವರ ರೈತರ ವಿರೋಧಿಯಾಗಿ ಕೆಲಸ ಮಾಡಿದ್ದಾರೆ ಅದಕ್ಕೆ ನನ್ನ ಹತ್ತಿರ ಸಾಕ್ಷಿ ಇವೆ. ಆದರೆ ಅದೇ ಕಷ್ಟಕ್ಕೆ ಪ್ರಿಯಾಂಕ್ ಖರ್ಗೆ ರವರು ಸ್ಪಂದಿಸಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಈಗ ಅವರ ಪ್ರಗತಿ ಸಹಿಸದ ಅತೃಪ್ತ ಆತ್ಮಗಳು ಈ ರೀತಿ ಆರೋಪ ಮಾಡುತ್ತಿವೆ ಎಂದು ಸ್ವಪಕ್ಷದ ಮುಖಂಡರ ವಿರುದ್ಧವೇ ನಂದಾ ರೆಡ್ಡಿ ಅಕ್ಷೇಪ ವ್ಯಕ್ತಪಡಿಸಿದ್ದಾರೆ.