ವೀರಶೈವ ಲಿಂಗಾಯತ ಮಹಾಸಭಾ ಸಮಾರಂಭದಲ್ಲಿ ಕಾಂಗ್ರೆಸ್-ಬಿಜೆಪಿ ಮುಖಂಡರ ಸವಾಲ್ ಜವಾಬ್
ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿ,
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಸವಾಲ್ ಜವಾಬ್ ನಡೆದು ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿ ನಿರ್ಮಾಣವಾಯಿತು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿಯಲು ಸಂಘಟನೆ ಕೊರತೆ ಕಾರಣ, ಸಮಾಜದ ಮೇಲೆ ದೌರ್ಜನ್ಯ ಮತ್ತು ಅನ್ಯಾಯ ಆದಾಗ ಎಲ್ಲರೂ ಒಗ್ಗೂಡಿ ಕೈಜೋಡಿಸಬೇಕು ಎಂದರು, ಸಮಾಜದ ರಕ್ಷಣೆಗಾಗಿ ಸಂಘಟನೆ ಆಗಬೇಕು ಹೊರತು ಬೇರೆ ಸಮಾಜದ ಮೇಲೆ ಭಲ ಪ್ರಯೋಗ ಮಾಡಲು ಅಲ್ಲ ಎಂದು ಕಿವಿಮಾತು ಹೇಳಿದರು. ಬಸವ ಭವನ ನಿರ್ಮಾಣಕ್ಕೆ 50 ಲಕ್ಷ ಮಂಜೂರಾಗಿ ಎರಡು ವರ್ಷ ಆಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ ಅವಂಟಿ ಮಾತನಾಡಿ, ಚಿತ್ತಾಪುರದಲ್ಲಿ ಎಲ್ಲ ಸಮಾಜಗಳಿಗೆ ಸಮುದಾಯದ ಭವನ ಆಗಿವೆ ಆದರೆ ವೀರಶೈವ ಲಿಂಗಾಯತ ಸಮಾಜಕ್ಕೆ ಬಸವ ಭವನ ಆಗಿಲ್ಲ ಇದು ಬಹಳ ಬೇಸರದ ಸಂಗತಿ, ಕಾಂಗ್ರೆಸ್ ಪಕ್ಷದಲ್ಲಿರುವ ಸಮಾಜದ ಮುಖಂಡರು ಶಾಸಕರು, ಸಚಿವರ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಆಗ ಮತ್ತೆ ನಾಗರೆಡ್ಡಿ ಪಾಟೀಲ ಕರದಾಳ ಎದ್ದು ನಿಂತು ಬಸವ ಭವನದ ಸ್ಥಳದ ಸಮಸ್ಯೆ ಇತ್ತು ಈ ಕುರಿತು ಸಚಿವರ ಗಮನಕ್ಕೆ ತರಲಾಗಿದೆ, ಇನ್ನೂ ಎರಡು ತಿಂಗಳಲ್ಲಿ ಅಡಿಗಲ್ಲು ಆಗಲಿದೆ ಸುಮಾರು ಎರಡು ಕೋಟಿ ಎಸ್ಟಿಮೇಟ್ ಇದೆ ಎಂದು ಸ್ಪಷ್ಟಪಡಿಸಿದರು. ಮತ್ತೆ ಚಂದ್ರಶೇಖರ ಅವಂಟಿ ಮಾತನಾಡಿ ಈಗ ಎರಡು ತಿಂಗಳು ಅಂತ ಹೇಳುತ್ತಾರೆ ಮುಂದೆ ಕೇಳಿದರೆ ಮತ್ತೇ ಎರಡು ತಿಂಗಳು ಅಂತ ಹೇಳಿ ದಿನ ಮುಂದುಡುತ್ತಾರೆ ಎಂದು ಕುಟುಕಿದರು.
ಬಿಜೆಪಿ ಮುಖಂಡ ಸೋಮಶೇಖರ ಪಾಟೀಲ ಬೆಳಗುಂಪಾ ಮಾತನಾಡಿ, ವೇದಿಕೆಯ ಮೇಲೆ ಬರೀ ಭಾಷಣ ಮಾಡುವುದೇ ಸಾಧನೆ ಅಲ್ಲ, ಭಾಷಣ ಮಾಡಿದ ಹಾಗೇ ಕೆಲಸ ಮಾಡಿ ತೋರಿಸಬೇಕು ಎಂದು ಖಾರವಾಗಿ ಹೇಳಿದರು. ಕೊಟನೂರ ಘಟನೆ ನಡೆದಾಗ ಜಿಲ್ಲಾಧ್ಯಕ್ಷ ಮೋದಿ ಭಾಗವಹಿಸಲಿಲ್ಲ ಸಮಾಜದ ಮೇಲೆ ದೌರ್ಜನ್ಯ ಆದಾಗ ಪಕ್ಷ ಮರೆತು ಸ್ಪಂದಿಸಬೇಕಿತ್ತು ಯಾಕೆ ದೂರ ಇದ್ದಿರಿ ಎಂದು ಕಾಲೇಳೆದರು. ಕಳೆದ ಎಂಟು ವರ್ಷಗಳಿಂದ ಬಸವ ಭವನ ನೆನೆಗುದಿಯಲ್ಲಿದೆ ಎಂದರು.
ಕಾಂಗ್ರೆಸ್ ಮುಖಂಡ ಶಾಂತಣ್ಣ ಚಾಳೀಕಾರ ಮಾತನಾಡಿ, ಸಮಾಜದ ಮುಖಂಡರಿಂದ ವೀರಶೈವ ಲಿಂಗಾಯತ ಸಮಾಜ ಹಾಳಾಗಿದ್ದು ಹೊರತು ಹಳ್ಳಿಯ ಮುಖಂಡರಿಂದಲ್ಲ, ಮುಖಂಡರು ಸರಿ ದಾರಿಗೆ ಹೋದಾಗ ಸಮಾಜ ಸರಿ ದಾರಿಗೆ ಹೋಗಲಿದೆ ಎಂದು ತಿವಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಮಾತನಾಡಿ, ಕೊಟನೂರ ಘಟನೆ ಆದಾಗ ಮೊದಲು ಹೋಗಿದ್ದೆ ನಾನು, ಆ ಸಂದರ್ಭದಲ್ಲಿ ನಾನು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಸ್ಪಂದಿಸಿ ಆಗಬೇಕಾದ ಕೆಲಸಗಳು ಮಾಡಿದ್ದೇವೆ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ನಾನು ಟೀಕೆಗಳಿಗೆ ಹೆದರಲ್ಲ ಜಗ್ಗಲ್ಲ ಎಂದು ನೇರವಾಗಿ ಉತ್ತರಿಸಿದರು.
ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿನ್ನೆಡೆಗೆ ಸಂಘಟನೆ ಕೊರತೆ ಇದು ನಮ್ಮ ದೌರ್ಬಲ್ಯವೆಂದು ಎಂದರು. ಸಮಾಜದ ಸಂಘಟನೆಗೆ ದುಡಿಯಲು ನಾನು ದಿನದ 24 ಗಂಟೆ ಕಾಲ ಸಿದ್ದ, ಸಮಾಜದ ಮೇಲೆ ಅನ್ಯಾಯ ಮತ್ತು ದೌರ್ಜನ್ಯ ಆದಾಗ ನನಗೆ ಕರೆ ಮಾಡಿ ನಾನು ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಮಾಡಲಾಗಿದೆ ತಾಲೂಕಿನಲ್ಲಿಯೂ ಹಾಸ್ಟೆಲ್ ಮಾಡಿ ಅದಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಸಹಾಯಧನ ಮಾಡುತ್ತೇನೆ ಎಂದರು.
ಸಮಾರಂಭ ಉದ್ಘಾಟಿಸಿದ ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿದರು. ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಹಲಕರ್ಟಿ ಶ್ರೀ ರಾಜಶೇಖರ ಶಿವಾಚಾರ್ಯರು, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಶಿವಲಿಂಗಪ್ಪ ವಾಡೇದ್, ಶರಣಬಸಪ್ಪ ಕೋಬಾಳ ಶಹಾಬಾದ, ಶಶಿಕಾಂತ್ ಪಾಟೀಲ ಬೆಳಗುಂಪಾ, ರಾಜಶೇಖರ್ ಸಿರಿ ಜೇವರ್ಗಿ, ಗೌರಿ ಚಿಂತಕೋಟಿ, ಸೋಮಶೇಖರ ಹಿರೇಮಠ, ಶರಣು ಪಾಟೀಲ ಚಿಂಚೋಳಿ, ರಾಜಶೇಖರ್ ನೀಲಂಗಿ ಸೇಡಂ, ಸಿದ್ದು ಅಂಗಡಿ ಜೇವರ್ಗಿ, ಸಿದ್ದುಗೌಡ ಅಫಜಲಪುರ, ಶೇಖರ ಪಾಟೀಲ ಕಾಳಗಿ, ಬಸವರಾಜ ಪಾಟೀಲ ಭಾಗೋಡಿ, ಪ್ರಸಾದ್ ಅವಂಟಿ, ಅನೀಲ್ ವಡ್ಡಡಗಿ, ವೆಂಕಟಮ್ಮ ಪಾಲಪ್, ವೀರಣ್ಣ ಸುಲ್ತಾನಪೂರ, ಮಹೇಶ್ ಬೆಟಗೇರಿ, ರಾಜಶೇಖರ್ ತಿಮ್ಮನಾಯಕ, ಆನಂದ ಪಾಟೀಲ ನರಿಬೋಳ, ಸೋಮು ನಾಲವಾರ, ಡಿ.ಕೆ.ಪಾಟೀಲ, ಸಂತೋಷ ಹಾವೇರಿ, ಜಗದೇವ ದಿಗ್ಗಾಂವಕರ್, ಮಹೇಶ್ ಬಾಳಿ, ಮಲ್ಲರೆಡ್ಡಿ ಗೋಪಸೇನ್, ರವೀಂದ್ರ ಸಜ್ಜನಶೆಟ್ಟಿ, ಪ್ರಕಾಶ್ ಹಂಚಿನಾಳ, ಚಂದ್ರಶೇಖರ ಬಳ್ಳಾ, ವಿಶ್ವನಾಥ ನೆನಕಿ, ಚಂದ್ರಶೇಖರ ಉಟಗೂರ, ಕೋಟೇಶ್ವರ ರೇಷ್ಮಿ, ಬಸವರಾಜ ಸಂಕನೂರ, ಈಶ್ವರ ಬಾಳಿ, ನಿಂಬಣ್ಣಗೌಡ ಇಟಗಿ, ಬಸವಂತರಾವ್ ಮಾಲಿ ಪಾಟೀಲ, ಬಸವರಾಜ ಕೀರಣಗಿ ಸೇರಿದಂತೆ ಇತರರು ಇದ್ದರು. ಅಂಬರೀಷ್ ಸುಲೇಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಂತಣ್ಣ ಚಾಳೀಕಾರ ಸ್ವಾಗತಿಸಿದರು, ವಿರೇಶ್ ಕರದಾಳ ನಿರೂಪಿಸಿದರು.