ರಾವೂರ ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನದ ನಿಮಿತ್ತ ಉಚಿತ ಕ್ಷೌರ ಸೇವೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ 33ನೇ ಜನ್ಮದಿನದ ದಿನದ ಅಂಗವಾಗಿ ರಾವೂರನ ಬಾಳಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಗುರು ಮೆನ್ಸ್ ಪಾರ್ಲರ್ ವತಿಯಿಂದ ಉಚಿತ ಕ್ಷೌರ ಸೇವೆಯನ್ನು ಮಾಡಲಾಯಿತು.
ಎರಡು ವರ್ಷಗಳಿಂದ ತಮ್ಮ ವೃತ್ತಿಯಲ್ಲಿ ದುಡಿಯುತ್ತಾ ಪೂಜ್ಯರ ಜನ್ಮದಿನದ ಅಂಗವಾಗಿ ಎರಡನೇ ವರ್ಷ ಒಂದು ದಿನ ಸಾರ್ವಜನಿಕರಿಗೆ ಉಚಿತ ಕ್ಷೌರ ಸೇವೆ ಮಾಡುವ ಸಂಕಲ್ಪದೊಂದಿಗೆ ಮಹಾದೇವ ವಡಗೇರಿ, ಅಂಬರೀಷ್ ವಡಗೇರಿ, ಶರಣು ವಡಗೇರಿ, ಭಾಗಣ್ಣ ವಡಗೇರಿ ಮತ್ತು ಗಂಗಾಧರ ವಡಗೇರಿ ಅವರು ಇಂತಹ ಸತ್ಕಾರ್ಯ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. 100 ಕ್ಕೂ ಹೆಚ್ಚು ಜನರು ಇದರ ಲಾಭವನ್ನು ಪಡೆದುಕೊಂಡರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿದ್ದಲಿಂಗ ಬಾಳಿ, ಪೂಜ್ಯರ ಜನ್ಮದಿನವನ್ನು ಅರ್ಥಪೂರ್ಣವಾಗಿಸಲು ಮಾಡುತ್ತಿರುವ ಇಂತಹ ಸೇವೆ ನಿಜಕ್ಕೂ ಸಾರ್ಥಕವಾದದ್ದು. ಇದೊಂದು ಮಾದರಿ ಕಾರ್ಯವಾಗಿದೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೂ ಸನ್ಮಾನಿಸಿ ಗೌರವಿಸಿದ್ದು ಶ್ಲಾಘನೀಯ ಕಾರ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಅಣ್ಣಾರಾವ ಬಾಳಿ, ದೇವಿಂದ್ರಪ್ಪ ರದ್ದೇವಾಡಗಿ, ಸೋಮಶೇಖರ ಮಠಪತಿ, ಮಹೇಶ್ ಬಾಳಿ, ಭೀಮರಾವ ಪಾಟೀಲ್, ಶಾಂತು ಬಾಳಿ, ಗುರುರಾಜ ವೈಷ್ಣವ, ಸಂಗಮೇಶ ಪೂಜಾರಿ, ಅಶೋಕ ವಗ್ಗರ, ಮಲ್ಲು ಮುತ್ತಗಿ, ಅಂಬರೀಷ್ ಸಾಂಗ್ಲಿಯಾನ, ಶಿವಲಿಂಗ ಯಳಮೇಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.