ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ರುದ್ರಮುನಿ ಮಠಪತಿ ಕೊಂಚುರ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಮಾರ್ಚ್ 12 ರಂದು ಸರ್ಕಾರದಿಂದ ಆಚರಿಸುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ರುದ್ರಮುನಿ ಮಠಪತಿ ಕೊಂಚುರ ಆಯ್ಕೆಯಾಗಿದ್ದಾರೆ.
ಶಹಾಬಜಾರ್ ಕಡಗಂಚಿ ಮಠದಲ್ಲಿ ಜರುಗಿದ ಜಿಲ್ಲಾ ಜಂಗಮ ಸಮಾಜದ ಸಭೆಯಲ್ಲಿ 2025-26 ನೇ ಸಾಲಿನ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿ ರುದ್ರಮುನಿ ಮಠಪತಿ ಕೊಂಚುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಯಂತೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರುದ್ರಮುನಿ ಮಠಪತಿ ಕೊಂಚುರ ಮಾತನಾಡಿ, ಜಯಂತಿ ಸಮಾರಂಭದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಹಾಗೂ ಸೂಕ್ತ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಜಂಗಮ ಸಮಾಜದ ಮುಖಂಡರಾದ ಸತೀಶ್ ಸ್ವಾಮಿ, ವೀರಭದ್ರ ಸ್ವಾಮಿ ನರೋಣಾ, ವಿ.ಆರ್ ಸ್ವಾಮಿ ರುದ್ರಯ್ಯ ಅಳಂದ, ನಾಗಲಿಂಗಯ್ಯ ಮಠಪತಿ, ಸಿದ್ದಲಿಂಗ ಸ್ಥಾವರಮಠ ವಿ.ಬಿ ಮಠಪತಿ, ಗುರುಬಾಯಿ ವಸ್ತ್ರದ್, ಜ್ಯೋತಿ ಹಿರೇಮಠ, ಶರಣಮ್ಮ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.