ರಟಕಲ್ ರೇವಣಸಿದ್ದೇಶ್ವರ ಹುಂಡಿಯಲ್ಲಿ 37.94 ಲಕ್ಷ ಹಣ ಸಂಗ್ರಹ
ನಾಗಾವಿ ಎಕ್ಸಪ್ರೆಸ್
ಕಾಳಗಿ : ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸೇಡಂ ಸಹಾಯಕ ಆಯುಕ್ತ ಕಚೇರಿ ತಹಶೀಲ್ದಾರ್ ನಾಗನಾಥ ತರಗೆ ನೇತೃತ್ವದಲ್ಲಿ ತಾಲೂಕು ಕಂದಾಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಸಹಾಯಕಿಯರು ಹುಂಡಿ ಹಣ ಎಣಿಕೆ ಮಾಡಿದ್ದು, 37,94,560 ರೂ. ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 30, 2024 ರಿಂದ ಇಲ್ಲಿಯವರೆಗೆ ಸುಮಾರು ಆರು ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಗಿದೆ.
37,94,560 ರೂ. ನಗದು ಹಣ, 25 ಗ್ರಾಂ ಬಂಗಾರ, ಒಂದು ಕೆ.ಜಿ 745 ಗ್ರಾಂ (1.745ಕೆ.ಜಿ) ಬೆಳ್ಳಿ ಸಂಗ್ರಹವಾಗಿವೆ. ಹುಂಡಿಯಲ್ಲಿ ಸಂಗ್ರಹವಾದ ನಗದು ಹಣವನ್ನು ರೇವಗ್ಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನ ಖಾತೆಗೆ ಜಮಾ ಮಾಡಲಾಗಿದೆ. ಬಂಗಾರ, ಬೆಳ್ಳಿಯನ್ನು ದೇವಸ್ಥಾನ ಟ್ರೆಜರಿಯಲ್ಲಿ ಇಡಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಕಚೇರಿ ತಹಶೀಲ್ದಾರ್ ನಾಗನಾಥ ತರಗೆ ತಿಳಿಸಿದ್ದಾರೆ.
ಕಾಳಗಿ ತಾಲೂಕು ತಹಶೀಲ್ದಾರ ಘಮಾವತಿ ರಾಠೋಡ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಬಸವಣ್ಣಪ್ಪ ಹೂಗಾರ, ಎಸ್.ಡಿಎ ಹೇಮಂತ ಜಗತಾಪ್, ಕಂದಾಯ ಇಲಾಖೆ ಸಿಬ್ಬಂಧಿಗಳು, ಅಂಗನವಾಡಿ ಸಹಾಯಕಿಯರು, ಗ್ರಾಮ ಸಹಾಯಕರು ಇದ್ದರು.