ಕಂಪ್ಯೂಟರನಲ್ಲಿ ಕನ್ನಡ ಲಿಪಿ ನುಡಿ ಜಾರಿಗೊಳಿಸಿದ ಅಪ್ಪಟ ಕನ್ನಡಿಗ ಎಸ್.ಎಂ. ಕೃಷ್ಣ: ಶಿವರಾಜ್ ಅಂಡಗಿ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಆಂಗ್ಲ ಭಾಷೆಯಲ್ಲಿ ಪಾಂಡಿತ್ಯ ಹಾಗೂ ಎಕ್ಸ್ಪರ್ಟ್ ಇದ್ದರೂ ಕನ್ನಡದ ಭಾಷೆ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಇರುವುದರಿಂದಲೇ ಮಾಹಿತಿ ತಂತ್ರಜ್ಞಾನ ಸಮರ್ಥವಾಗಿ ಬಳಕೆ ಮಾಡಿಕೊಂಡ ಅಪ್ಪಟ ಕನ್ನಡಿಗ ಇವರು ಕಂಪ್ಯೂಟರ್ ಜ್ಞಾನವನ್ನು ಹೆಚ್ಚು ಜನರು ಬಳಕೆ ಮಾಡಬೇಕಾದರೆ ಪ್ರಾದೇಶಿಕ ಭಾಷೆಯ ಅವಶ್ಯಕತೆ ಇದೆ ಎಂದು ಭಾವಿಸಿ ಕನ್ನಡದಲ್ಲಿ ಲಿಪಿ ತಂತ್ರಾಂಶ ಸಿದ್ಧಪಡಿಸಿ ಅದನ್ನು ನುಡಿ ಎಂದು ಹೆಸರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತೀಯ ಭಾಷೆಗೆ ಕನ್ನಡ ಮಾದರಿಯಾದ ಎಸ್.ಎಕ.ಕೃಷ್ಣ ಅವರು ದೇಶದಲ್ಲೇ ನಂಬರ್ ಒನ್ ಮುಖ್ಯಮಂತ್ರಿ ಆಗಿ ಹೊರಹೊಮ್ಮಿದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ನುಡಿನಮನ ಸಲ್ಲಿಸಿದ್ದಾರೆ.
ಮಂಡ್ಯದಲ್ಲೇ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿ ಕನ್ನಡದ ಅಭಿಮಾನ ವ್ಯಕ್ತಪಡಿಸಿದ ಎಸ್.ಎಂ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥನೆ ಮಾಡಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.