Oplus_0

ಸಾಲಗಾರರ ಕಿರುಕುಳ ತಪ್ಪಿಸಲು ಸುಗ್ರಿವಾಜ್ಞೆ ಜಾರಿ: ಸಿಎಂ ಸಿದ್ದರಾಮಯ್ಯ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸಲು ರಾಜ್ಯದಲ್ಲಿ ಹೊಸ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಗಾರರ ಕಿರುಕುಳ ತಡೆಯಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾವು ಯಾರಿಗೂ ಸಾಲ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ಆರ್ ಬಿಐ ನಿಯಮ ಪಾಲಿಸಿದ್ದೀರಾ ಎಂದು ಎಂದು ಪ್ರಶ್ನಿಸಬೇಕಾಗುತ್ತದೆ. ಅಲ್ಲದೇ ಕಾನೂನಿ ಚೌಕಟ್ಟಿನಲ್ಲಿ ಬಡ್ಡಿಗೆ ಸಾಲ ಕೊಡುವುದು ಹಾಗೂ ಸಾಲ ಪಡೆಯುವ ಬಗ್ಗೆ ಸರ್ಕಾರದ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸಾಲ ಪಡೆದವರಿಗೆ ಕಿರುಕುಳ ನೀಡುವುದು ಬೆದರಿಕೆ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಆರ್ ಬಿಐ ನಿಯಮದ ಪ್ರಕಾರ ಶೇ. 17.07 ಕ್ಕಿಂತ ಹೆಚ್ಚು ಬಡ್ಡಿ ಪಡೆಯುವಂತಿಲ್ಲ. ಆದರೆ ಶೇ.28 ರಿಂದ 29 ರಷ್ಟು ಬಡ್ಡಿ ಪಡೆಯುತ್ತಿರುವ ಮಾಹಿತಿ ಇದೆ. ಇದನ್ನು ಕೂಡಲೇ ತಡೆಗಟ್ಟಬೇಕು ಎಂದು ಹೇಳಿದರು.

ಫೈನಾನ್ಸ್ ಕಂಪನಿಯವರು, ಗಿರವಿ ಅಂಗಡಿಯವರು ಸಾಲ ವಸೂಲಾತಿಗೆ ಗುತ್ತಿಗೆ ಅಥವಾ ರೌಡಿಗಳಿಗೆ ನೀಡುವಂತಿಲ್ಲ. ಸಂಜೆ 5 ಗಂಟೆಯ ನಂತರ ಮನೆ ಬಳಿ ಹೋಗುವಂತಿಲ್ಲ ಎಂಬ ನಿಯಮಗಳನ್ನು ಅನುಸರಿಸಲು ಫೈನಾನ್ಸ್ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!