Oplus_0

ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ವಿದ್ಯಾರ್ಥಿಗಳಿಗೆ 1500 ಸ್ಪರ್ಧಾತ್ಮಕ ಪುಸ್ತಕಗಳು ವಿತರಣೆ, ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬ ಅರ್ಥಪೂರ್ಣ ಆಚರಣೆ: ಕರದಾಳ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಬೆಲೆಬಾಳುವ ಪುಸ್ತಕಗಳನ್ನು ವಿತರಣೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.

ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ತ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊಸತನದ ರೂವಾರಿಯಾಗಿದ್ದು ಸಿಕ್ಕ ಅಧಿಕಾರವನ್ನು ಜನೋಪಯೋಗಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೋಸ್ಕರ ಉಪಯೋಗಿಸುವ ರಾಜ್ಯದ 224 ಶಾಸಕರಲ್ಲಿ ಪ್ರಿಯಾಂಕ್ ಖರ್ಗೆ ಅವರು ಮೊದಲಿಗರಾಗಿದ್ದಾರೆ ಎಂದು ಬಣ್ಣಿಸಿದರು.

ಪ್ರಿಯಾಂಕ್ ಖರ್ಗೆ ಅವರಲ್ಲಿ ಕಾಯಕ ಬದ್ಧತೆ, ಕರ್ತವ್ಯ ನಿಷ್ಠೆ ಇದೆ, ಅವರು ಎಲ್ಲರನ್ನು ತೆಗೆದುಕೊಂಡು ಹೋಗುವ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆ ಮಾಡುವವರಾಗಿದ್ದು, ಅವರ ವಿಶಿಷ್ಟ ಸೇವೆಯಿಂದ ಇಂದು ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಪಟ್ಟಣದ 15 ವಸತಿ ನಿಲಯದ ವಿದ್ಯಾರ್ಥಿಗಳಿಗೆ 1500 ಪುಸ್ತಕಗಳು ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವಸತಿ ನಿಲಯಕ್ಕೆ 60 ರಿಂದ 100 ಪುಸ್ತಕಗಳು ವಿತರಣೆ ಮಾಡಲಾಗಿದೆ, ಸ್ಪರ್ಧಾತ್ಮಕ ಪರೀಕ್ಷೆಗೆ, ವ್ಯಕ್ತಿತ್ವ ವಿಕಸನಕ್ಕೆ, ಭಾರತದ ಸಂವಿಧಾನಕ್ಕೆ ಹಾಗೂ ಜ್ಞಾನಾರ್ಜನೆಗೆ ಸಂಬಂಧಿಸಿದಂತೆ ಮೌಲ್ಯಯುತ ಪುಸ್ತಕಗಳು ವಿತರಣೆ ಮಾಡಲಾಗಿದೆ ಹೀಗಾಗಿ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಜಗದೇವರೆಡ್ಡಿ ಪಾಟೀಲ, ಕುಂದನ್ ಸಿಂಗ್, ಶೀಲಾ ಕಾಶಿ, ಎಂ.ಎ.ರಷೀದ್, ನಾಗರೆಡ್ಡಿ ಗೋಪಸೇನ್, ಸಂಜಯ ಬುಳಕರ್, ಭೀಮಸಿಂಗ ಚವ್ಹಾಣ, ಸಾಬಣ್ಣ ಕಾಶಿ, ರಾಮಲಿಂಗ ಬಾನರ್, ಜಗದೀಶ್ ಚವ್ಹಾಣ, ಓಂಕಾರ ರೇಷ್ಮಿ, ರವಿ ರಾಠೋಡ, ನಿಂಗಣ್ಣ ಹೆಗಲೇರಿ, ಹಣಮಂತ ಸಂಕನೂರ, ಬಸಣ್ಣ ತಳವಾರ, ನಾಗಪ್ಪ ಕಲ್ಲಕ್, ಗೋಪಿ ರಾಠೋಡ, ವಿನ್ನುಕುಮಾರ ಜಡಿ, ಸಂತೋಷ ಪೂಜಾರಿ, ಭೀಮರಾಯ ಹೊತಿನಮಡಿ, ಕರಣಕುಮಾರ್ ಅಲ್ಲೂರು, ವಿಜಯಕುಮಾರ್ ಯಾಗಾಪೂರ, ಭೀಮಾಶಂಕರ ಹೋಳಿಕಟ್ಟಿ ಸೇರಿದಂತೆ ಅನೇಕರು ಇದ್ದರು. ವಾರ್ಡನ್ ಜಯಲಕ್ಷ್ಮೀ ಸ್ವಾಗತಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!