ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ಯುವ ಕಾಂಗ್ರೆಸ್ ನಿಂದ ರಕ್ತದಾನ ಶಿಬಿರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ತ ಯುವ ಕಾಂಗ್ರೆಸ್ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಯುವ ಕಾರ್ಯಕರ್ತರು ಬಹಳ ಉತ್ಸಾಹದಿಂದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್, ಕುದನ್ ಸಿಂಗ್, ಜಗದೇವರೆಡ್ಡಿ ಪಾಟೀಲ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ ಚವ್ಹಾಣ, ರಾಮಲಿಂಗ ಬಾನರ್, ಗುಂಡು ಐನಾಪುರ, ರವಿ ಇವಣಿ, ಜಗದೀಶ್ ಚವ್ಹಾಣ, ಓಂಕಾರ ರೇಷ್ಮಿ, ನಾಗಪ್ಪ ಕಲ್ಲಕ್, ವಿನ್ನುಕುಮಾರ ಜಡಿ, ಸಂತೋಷ ಪೂಜಾರಿ, ನಾಗೇಂದ್ರ ಬುರ್ಲಿ, ಕರಣಕುಮಾರ್ ಅಲ್ಲೂರು, ಯಲ್ಲಯ್ಯ ಕಲಾಲ್ ಸೇರಿದಂತೆ ಅನೇಕರು ಇದ್ದರು.