Oplus_0

ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ದೇಹದಾನ ಮಾಡಿದ ಅಭಿಮಾನಿ ವಿಶ್ವನಾಥ ಬೀದಿಮನಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿಬಿಟಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನ.22 ರಂದು 46 ನೇ ಜನ್ಮದಿನದ ಪ್ರಯುಕ್ತ ಅವರ ಅಪ್ಪಟ್ಟ ಅಭಿಮಾನಿ ಪಟ್ಟಣದ ಕಾಂಗ್ರೆಸ್ ಯುವ ಮುಖಂಡ ವಿಶ್ವನಾಥ ಬೀದಿಮನಿ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಗೆ ದೇಹದಾನ ಮಾಡುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

37 ವರ್ಷದ ವಿಶ್ವನಾಥ ಬೀದಿಮನಿ ಮೊದಲಿಂದಲೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದು, ಸಚಿವರ ಹುಟ್ಟು ಹಬ್ಬದ ನಿಮಿತ್ತ ತಮ್ಮ ದೇಹದಾನ ಮಾಡುವ ಮೂಲಕ ತಮ್ಮ ಪ್ರೀತಿ ಮತ್ತು ಅಭಿಮಾನ ಮೆರೆದಿದ್ದಾರೆ. ಇತನ ಸಮಾಜಮುಖಿ ಮಹಾ ಕಾರ್ಯಕ್ಕೆ ಪಟ್ಟಣದ ಸಾರ್ವಜನಿಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ತಮ್ಮ ಮರಣದ ನಂತರ ದೇಹದಾನವನ್ನು ಮಾಡಲು ನೋಂದಾಯಿಸಿರುವ ವಿಚಾರ ಶ್ಲಾಘನೀಯವಾದುದು.

ದೇಹದಾನದ ನೋಂದಣಿ ಸಂಖ್ಯೆ: 1103 ಆಗಿದ್ದು, ನೀವು ಮಾಡಲಿಚ್ಚಿಸಿರುವ ದೇಹದಾನವನ್ನು ಬಹಳ ಗೌರವಪೂರ್ವಕವಾಗಿ ಅಂಗೀಕರಿಸುತ್ತೇವೆ. ವೈದ್ಯಕೀಯ ಶಿಕ್ಷಣ ಕ್ಷೇತಕ್ಕೆ ತಾವು ಈ ರೀತಿಯ ಸೇವೆ ಸಲ್ಲಿಸಲು ಮುಂದೆ ಬಂದಿರುವುದು ನಿಜಕ್ಕೂ ಅವಿಸ್ಮರಣೀಯ. ತಮಗೆ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ಆರೋಗ್ಯ ಭಾಗ್ಯ, ದೀರ್ಘಾವಧಿ ಸುಖ ಸಂತೋಷ ಮತ್ತು ನೆಮ್ಮದಿ ಬಾಳ್ವೆಗೆ ತಮ್ಮ ಇಚ್ಛಾಪೂರ್ವಕವಾದ ಆಶೀರ್ವಾದವನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!