Oplus_0

ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮಗೆ ಹಣಮಂತ ಇಟಗಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಬೀದರ್‌ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರ ಕೈವಾಡವಿದ್ದು, ಆರೋಪಿಗಳನ್ನು ಬಂಧಿಸಬೇಕು ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ನಗರಸಭೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಚಿವ ಪ್ರಿಯಾಂಕ ಖರ್ಗೆಯವರ ಹಿಂಬಾಲಕರ ಕೊಲೆ ಬೆದರಿಕೆಯಿಂದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ಮರಣ ಪತ್ರದಲ್ಲಿ ಬರೆದಿದ್ದಾನೆ. ಕೂಡಲೇ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಇಂದು ಪ್ರತಿದಿನ ಗೂಂಡಾಗಳ ಹಾವಳಿ ಹೆಚ್ಚಾಗುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಹೀಗಾಗಿ ಗೂಂಡಾಗಳ ಉಪಟಳ ಹೆಚ್ಚಾಗಿದೆ. ಸರಕಾರದಲ್ಲಿರುವ ಸಚಿವರು ತಮ್ಮ ಹಿಂಬಾಲಕರ ಮೂಲಕ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿರವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಿರುವುದು ಮತ್ತು ಹಾಲಿ ಶಾಸಕ ಮುನಿರತ್ನ ಇವರ ಮೇಲೆ ಮೊಟ್ಟೆಯನ್ನು ಎಸೆದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿ ಅವರ ಮೇಲೆ ಇಲ್ಲದ ಸುಳ್ಳು ಕೇಸನ್ನು ಹಾಕಿಸಿ ಸರ್ಕಾರ ತಮ್ಮ ಹಿಂಬಾಲಕರಿಂದ ಗೂಂಡಾಗಿರಿ ಮಾಡಿಸುತ್ತ ಶಾಸಕರನ್ನು ಹೆದರಿಸುತ್ತಿರುವುದನ್ನು ಯಾದಗಿರಿ ಜಿಲ್ಲಾ ಭಾಜಪಾ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಬೀದರನಲ್ಲಿ ಸಚಿನ ಪಾಂಚಾಳ ಎಂಬ ಗುತ್ತಿಗೆದಾರನು ಇಂಜಿನಿಯರಿಂಗ್ ಪದವಿಧರನಾದ ಇವನು ಆತ್ಮಹತ್ಯೆಗೆ ಶರಣಾಗಿರುವುದು ಬಹಳ ದುಖ:ದ ಸಂಗತಿ ಇನ್ನು ಚಿಕ್ಕವಯಸ್ಸಿನಲ್ಲೆ, ಇಂತಹ ನಿರ್ದಾರ, ಕೈಗೊಂಡಿರುವುದಕ್ಕೆ, ಕಾರಣ ಸಚಿವ ಪ್ರಿಯಾಂಕ ಖರ್ಗೆಯವರ ಅಪ್ತ ಕಲಬುರ್ಗಿ ಕಾಂಗ್ರೆಸ್ ಮುಂಖಡ ರಾಜು ಕಪನೂರ ಹಾಗೂ ಇತರ 8 ಜನರು ಹಣ ಪಡೆದುಕೊಂಡು ಕಾಮಗಾರಿ ಕೊಡಿಸುವುದಾಗಿ ನಂಬಿಸಿ ಹಣವನ್ನು ಕೊಡದೆ ಟೆಂಡರ್ ಕಾಮಗಾರಿಯನ್ನು ಕೊಡದೆ ಸಚಿನಗೆ ಪೀಡಿಸಿದ್ದಾರೆ, ಕೊಟ್ಟ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಡೆತ್ ನೋಟನ್ನು ಬರೆದು ಸಚಿನ್ ಪಾಂಚಾಳ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.

ಈ ಹಿಂದೆ ಭಾಜಪ ಶೇ.40 ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ ಆಪಾದನೆ ಮಾಡುತ್ತ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ಇಂದು ತಮ್ಮ ಹಿಂಬಾಲಕರ ಮೂಲಕ ಶೇ100 ಕಮಿಷನ್ ಧಂಧೆಯ ಮುಖಾಂತರ ರಾಜ್ಯವನ್ನೇ ಲೂಟಿ ಮಾಡುತ್ತ ಇಂತಹ ಅಮಾಯಕರ ಜೀವ ತೆಗೆಯುವಂತ ಕೆಲಸ ಮಾಡುತ್ತಿದ್ದೆ. ಅಧಿಕಾರದಲ್ಲಿರುವ ಇವರು ಇವರ ಕಾರ್ಯಕರ್ತರ ವಿರುದ್ದ  ನಿಷಪಕ್ಷಪಾತ ತನಿಖೆ ನಡೆಸುವುದಿಲ್ಲ. ಸಚಿವ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆಯನ್ನು ನೀಡಬೇಕು ಹಾಗೂ ಈ ಆತ್ಮಹತ್ಯೆಗೆ ಕಾರಣರಾದ ಕಾಂಗ್ರೇಸ್ ಕಾರ್ಯಕರ್ತರಿಗೆ ಸೂಕ್ತ ತನಿಖೆಗೆ ಓಳಪಡಿಸಿ ಇವರಿಗೆ ಶಿಕ್ಷೆಯಾಗಬೇಕೆಂದು ಯಾದಗಿರ ಜಿಲ್ಲಾ ಭಾಜಪಾ ಸರ್ಕಾರಕ್ಕೆ ಒತ್ತಾಯಿಸುತ್ತದೆ, ಇಲ್ಲದೆ ಹೊದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!