Oplus_0

ಸಾದನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಕನಿಗೆ ಛಲ ಮುಖ್ಯ: ಕುಲಕರ್ಣಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಯಾವುದೇ ವೃತ್ತಿಯಿರಲಿ ಪ್ರವೃತ್ತಿಯಿರಲಿ, ಕಿರಿಯಿರಿಂದ ದೊಡ್ಡವರವರೆಗೆ ಯಾವುದೇ ವಯಸ್ಸಿನ ಅಡಚಣೆಯಿಲ್ಲ, ತಾವು ಸಾಧಿಸಬೇಕಾದ ಗುರಿಯಲ್ಲಿ ಸ್ಪಷ್ಟತೆಯಿರಬೇಕು, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಸಾಧಕನಿಗೆ ಛಲ ಮುಖ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷದ್ ಜಿಲ್ಲಾದ್ಯಕ್ಷ ರಾಜು ಕುಲಕರ್ಣಿ ಕರದಾಳ ಹೇಳಿದರು.

ಪಟ್ಟಣದ ನಾಗಾಯಿ ಗೋಶಾಲೆ ಆವರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಜಿಲ್ಲಾ ಪರಿಷದ್ ವತಿಯಿಂದ ಏರ್ಪಡಿಸಿದ್ದ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಪಶಸ್ತಿ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಯಾರು ಗುರುತಿಸಿರದ ಮತ್ತು ಪ್ರಚಾರ ಬಯಸದಿರುವ ಸಾಧನೆಗೈದವರಿಗೆ ಕಳೆದ ಹಲವು ವರ್ಷಗಳಿಂದಲೂ ಪುರಸ್ಕರಿಸಿ ಅಳಿಲು ಸೇವೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಜಿಲ್ಲಾ ಸದಸ್ಯ ನ್ಯಾಯವಾದಿ ಸಿದ್ದರಾಜ್ ಹೂಗಾರ ಮಾತನಾಡಿ, ಅಧ್ಯಕ್ಷ ರಾಜು ಕುಲಕರ್ಣಿ ಪ್ರಚಾರ ಬಯಸದೇ ಅನೇಕ ಕೃಷಿ ಉಪಕರಣಗಳ, ತಮ್ಮ ಹಳೆಯ ಅಮೂಲ್ಯ ಪುಸ್ತಕಗಳು, ಬಡ ವಿಧ್ಯಾರ್ಥಿಗಳಿಗೆ ಅಭ್ಯಾಸ ಸಾಮಗ್ರಿಗಳು ಹಲವಾರು ವರ್ಷಗಳಿಂದ ಕಾಣಿಕೆ ಕೊಡುತ್ತಿರುವರು ಅವರ ಕಾರ್ಯ ಶ್ಲಾಘನೀಯ ಎಂದರು.

ನಾಗಾವಿ ಗೋಶಾಲೆ ಅಧ್ಯಕ್ಷ ರಮೇಶ ಬಮ್ಮನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಕೋಟೇಶ್ವರ ರೇಷ್ಮಿ, ಶಿಕ್ಷಕರಾದ ಸುರೇಶ ಸರಾಫ್, ವೀರಭದ್ರಪ್ಪ ಹುಮ್ನಾಬಾದ, ಮುನಿಯಪ್ಪ ಕಡಬೂರ, ರಾಜಶೇಖರ ಕಡ್ಲಿ, ನೂರಂದಪ್ಪ ಸಿಂಪಿ ಸೇರಿದಂತೆ ಗೋಶಾಲೆ ಸದಸ್ಯರು, ಪರಿಷದ್ ಸದಸ್ಯರು, ಸಾರ್ವಜನಿಕರು ಇದ್ದರು. ಸಂತೋಷ ಹಾವೇರಿ ಸ್ವಾಗತಿಸಿದರು, ನ್ಯಾಯವಾದಿ ಧನರಾಜ ದೇಶಪಾಂಡೆ ವಂದಿಸಿದರು.

ಪ್ರಶಸ್ತಿ ವಿಜೇತರು: ವೀರಭದ್ರಪ್ಪ ಗುರುಮಿಟಕಲ್ ( ಶಿಕ್ಷಣ ಕ್ಷೇತ್ರ), ಹರಿದಾಸ ರಾಠೋಡ ( ಪೊಲೀಸ್ ಇಲಾಖೆ ), ಶೆಹನಾಜ ಬೇಗಮ್ ಇಕ್ಬಾಲ್ ಸೇಟ್ ( ಜನಪ್ರತಿನಿಧಿ ).

Spread the love

Leave a Reply

Your email address will not be published. Required fields are marked *

You missed

error: Content is protected !!