ಚಿತ್ತಾಪುರ ತಾಲೂಕಿನಲ್ಲಿ 2005 ರಲ್ಲಿ ಪತ್ರಿಕಾ ರಂಗದಲ್ಲಿ ಪಾದಾರ್ಪಣೆ ಮಾಡಿದ ಶ್ರೀಯುತ ಕಾಶಿನಾಥ ಗುತ್ತೇದಾರ ಅವರು ಜನಪರ, ಸಮಾಜಪರ ಮತ್ತು ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಸುದ್ದಿಗಳು ಬರೆದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸೇವೆಗೈದ ಶ್ರೀಯುತರು, ಕನ್ನಡ ಪ್ರಭ, ಉದಯವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳ ವರದಿಗಾರರಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಾಗಾವಿ ನಾಡಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಾಗಾವಿ ಎಕ್ಸಪ್ರೆಸ್ ಕನ್ನಡ ದಿನಪತ್ರಿಕೆ ಹುಟ್ಟು ಹಾಕುವ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ಶ್ರೀಯುತರು ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ಮತ್ತು ಪತ್ರಿಕಾ ರಂಗಗಳಲ್ಲಿ ನಿರಂತರವಾಗಿ ಹಾಗೂ ಅವಿಸ್ಮರಣೀಯವಾದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಸ್ವಂತ ದಿನಪತ್ರಿಕೆ ಹೊರತರುತ್ತಿರುವ ಸಾಲಿಗೆ ಸೇರುವ ಮೊದಲು ಪತ್ರಕರ್ತರು ಅವರೇ ಕಾಶಿನಾಥ ಗುತ್ತೇದಾರ ಚಿತ್ತಾಪುರ ಎಂದರೆ ತಪ್ಪಾಗಲಾರದು.