ಬಂಜಾರ ಸಮುದಾಯದ ಹಿರಿಯ ಸಾಧಕರಿಗೆ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ ಸರ್ಕಾರದ ಆದೇಶಕ್ಕೆ ಬಂಜಾರ ಸಮಾಜ ಸ್ವಾಗತ: ಭೀಮಸಿಂಗ್ ಚವ್ಹಾಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಂಜಾರ ಸಮುದಾಯದಲ್ಲಿ ವಿಶೇಷವಾದ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ ನೀಡಿ ಗೌರವಿಸಲು ಹಾಗೂ ಸದರಿ ಪ್ರಶಸ್ತಿ ಮೊತ್ತವನ್ನು ರೂ.1 ಲಕ್ಷಗಳಿಗೆ ನಿಗದಿಪಡಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದ ಸರ್ಕಾರದ ಆದೇಶವನ್ನು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಸ್ವಾಗತಿಸಿದ್ದಾರೆ.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಇವರ ವತಿಯಿಂದ ವಿಶೇಷವಾಗಿ ಜೀವಮಾನ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ರೂ.1.00 ಲಕ್ಷ ಮೌಲ್ಯದ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿಯನ್ನು ವಾರ್ಷಿಕವಾಗಿ ಒಬ್ಬರಿಗೆ ನೀಡುವಂತೆ ಆದೇಶಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಸಂಸ್ಕೃತಿ) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಬಂಜಾರ ಸಮಾಜದಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ ನೀಡುವ ಕ್ರಮ ಕೈಗೊಂಡ ಸರ್ಕಾರದ ಆದೇಶ ನಮಗೆ ಬಹಳ ಹೆಮ್ಮೆ ತಂದಿದೆ ಈ ಮೂಲಕ ಬಂಜಾರ ಸಮಾಜದ ಸಾಧಕರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.