ಸಂತೋಷ ನಗರದಲ್ಲಿ ಗಣೇಶ ಉತ್ಸವ | ಗಣೇಶ ಎಲ್ಲರ ವಿಘ್ನ ನಿವಾರಣೆ ಮಾಡಲಿ: ಅನ್ನಪೂರ್ಣ ಕಲ್ಲಕ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗಣೇಶ ಎಲ್ಲರ ಅಡೆತಡೆಗಳು ಮತ್ತು ವಿಘ್ನಗಳನ್ನು ನಿವಾರಣೆ ಮಾಡಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹೇಳಿದರು.
ಪಟ್ಟಣದ ಸಂತೋಷ ನಗರದಲ್ಲಿ ಮಹಿಳಾ ಮಂಡಳಿ, ಗಜಾನನ ಯುವಕ ಸಂಘದ ವತಿಯಿಂದ ಗಣೇಶ ಉತ್ಸವ ನಿಮಿತ್ತ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂತೋಷ ನಗರದಲ್ಲಿ ಗಣೇಶ ಉತ್ಸವ ನಿಮಿತ್ತ ಐದು ದಿನಗಳ ಕಾಲ ಮಹಿಳೆಯರು ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಪ್ರತಿ ವರ್ಷ ಸಂತೋಷ ನಗರದಲ್ಲಿ ಮಹಿಳೆಯರು, ಯುವಕರು ಸೇರಿಕೊಂಡು ಗಣೇಶ ಉತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ ಇದು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಗಣೇಶ ಉತ್ಸವ ಜನರಲ್ಲಿ ಎಕತೆ, ಒಗ್ಗೂಡುವಿಕೆ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುವುದು ಜೊತೆಗೆ ರಾಷ್ಟ್ರೀಯತೆ ಮೂಡಿಸುತ್ತದೆ. ಎಲ್ಲಾ ಉತ್ಸವಗಳಿಗಿಂತ ಗಣೇಶ ಉತ್ಸವ ವಿಶೇಷತೆ ಹೊಂದಿದೆ, ಎಲ್ಲಾ ಜಾತಿ ಜನಾಂಗದವರು ಒಗ್ಗೂಡಿ ಬಹಳ ಸಂತೋಷ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲ್ ಗಂಗಾಧರ್ ತಿಲಕ್ ಅವರು ಕೈಗೊಂಡ ಗಣೇಶ ಉತ್ಸವದ ಇತಿಹಾಸವನ್ನು ತಿಳಿಹೇಳಿದರು.
ಕಾಂಗ್ರೆಸ್ ಮುಖಂಡ ಶರಣಪ್ಪ ನಾಟೀಕಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಾಹರಪೇಟ್ ಹಾಜಿ ಮಲಂಗ ದರ್ಗಾದ ಖಾಸಿಂ ಬಾಬಾ, ಶರಣು ಬಾಬಾ, ಪತ್ರಕರ್ತರಾದ ರವಿಶಂಕರ ಬುರ್ಲಿ, ಚಂದ್ರಶೇಖರ ಬಳ್ಳಾ, ಕಾಂಗ್ರೆಸ್ ಮುಖಂಡ ನಾಗಪ್ಪ ಕಲ್ಲಕ್, ಮಹಿಳಾ ಮಂಡಳಿಯ ಕಾಶಿಬಾಯಿ ಗುತ್ತೇದಾರ, ಶ್ರೀದೇವಿ ಗುತ್ತೇದಾರ, ಅಂಬುಬಾಯಿ ಕಲಾಲ್, ಶ್ರೀದೇವಿ ತಳವಾರ, ಕವಿತಾ ಭಂಕಲಗಿ, ಜ್ಯೋತಿ ಮುಡಬೂಳಕರ್, ಮೀನಾಕ್ಷಿ ಮುಡಬೂಳ, ಬಸವರಾಜ ಮುಡಬೂಳಕರ್, ಜಗದೇವ ಗುತ್ತೇದಾರ, ಮಂಜುನಾಥ ಕೋಹಿನೂರ, ಅನೀಲ ಗುತ್ತೇದಾರ, ಮಲ್ಲಿಕಾರ್ಜುನ ನಂದಬೊ, ವಿಶ್ವರಾಜ್ ಕೋಹಿನೂರ ಸೇರಿದಂತೆ ಇತರರು ಇದ್ದರು.
ಶರಣಯ್ಯ ಸ್ವಾಮಿ ಪ್ರಾರ್ಥಿಸಿದರು, ಶ್ರೀನಿಧಿ ಸ್ವಾಗತ ನೃತ್ಯ ಮಾಡಿದರು, ಸುರೇಶ್ ಗಾಣಗಾಪುರ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

