Oplus_0

ಸಾರ್ವಜನಿಕರು ಬಯಲು ಶೌಚಕ್ಕೆ ಹೋದರೆ ಸ್ವಚ್ಛ ಭಾರತ ಮಿಷನ್ ಅಡಿ ದಂಢ ವಿಧಿಸಲಾಗುವುದು ಮುಖ್ಯಾಧಿಕಾರಿ ಎಚ್ಚರಿಕೆ 

ನಾಗಾವಿ ಎಕ್ಸಪ್ರೆಸ್ 

ವಾಡಿ: ಸಾರ್ವಜನಿಕರು ಬಯಲು ಶೌಚಕ್ಕೆ ಹೋದರೆ ಸ್ವಚ್ಛ ಭಾರತ ಮಿಷನ್ ಅಡಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ದಂಡ ವಿಧಿಸಲಾಗುವುದು ಎಂದು ವಾಡಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಬಹುತೇಕ ಕಡೆ ವೈಯಕ್ತಿಕ ಶೌಚಾಲಯ ಸಾರ್ವಜನಿಕ ಶೌಚಾಲಯಗಳು ಇಲ್ಲ, ಕೆಲವೊಂದು ಕಡೆ ಇದ್ದರು ಕೂಡಾ ಸರಿಯಾದ ನಿರ್ವಹಣೆ ಇಲ್ಲದೆ ಇರುವುದು ನಾವು ಗಮನಿಸಬಹುದು. ಮನೆ ಮನೆಗೆ ಶೌಚಾಲಯ ಎಂದು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ನಕಲಿ ಬಿಲ್ ಗಳ ಮೂಲಕ ಶೌಚಾಲಯದ ಹಣವನ್ನು ಪುರಸಭೆಯವರು ಕಬಳಿಸಿರುವ ಬಗ್ಗೆ ಸುಮಾರು ಸಲ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.

ಈಗ ಪುರಸಭೆ ಅಧಿಕಾರಿಗಳು ಬಯಲು ಶೌಚಾಲಯಕ್ಕೆ ದಂಡ ವಿಧಿಸಲು ಮುಂದಾಗಿದ್ದಾರೆ. ತಮ್ಮ ಕರ್ತವ್ಯದ ಅರಿವೇ ಇಲ್ಲದ ಅಧಿಕಾರಿಗಳು ಶೌಚಾಲಯಗಳೇ ಇಲ್ಲದ ವಾರ್ಡ್ ಗಳನ್ನು ಬಯಲು ಶೌಚ ಮುಕ್ತ ಬಡಾವಣೆಗಳೆಂದು ಘೋಷಿಸಿದ್ದಾರೆ. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಮತ್ತೊಮ್ಮೆ ದೂರು ನೀಡಿ ಇಂತಹ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದ್ದಾರೆ.

 

Spread the love

Leave a Reply

Your email address will not be published. Required fields are marked *

You missed

error: Content is protected !!