ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಅರ್ಜಿ ದಿನಾಂಕ ವಿಸ್ತರಣೆ: ಬಳೂಂಡಗಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: 2024 ಮತ್ತು 2025 ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ರಾಜ್ಯ ಸರಕಾರಿ ಅಧಿಕಾರಿಗಳು, ನೌಕರರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಲು ಏಪ್ರಿಲ್ 14 ಅಂತಿಮ ದಿನಾಂಕವಾಗಿತ್ತು, ಮತ್ತೆ ಸದರಿ ಅರ್ಜಿ ಅವಧಿಯನ್ನು ಮೇ.31 ರ ವರೆಗೆ ಸರಕಾರದ ಅಧೀನ ಕಾರ್ಯದರ್ಶಿಗಳು ವಿಸ್ತರಿಸಿ ಆದೇಶಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ.
ಜಿಲ್ಲಾ ಹಂತದಲ್ಲಿ 2024ನೇ ಸಾಲಿಗೆ 10 ಪ್ರಶಸ್ತಿ ಹಾಗೂ 2025ನೇ ಸಾಲಿಗೆ 10 ಪ್ರಶಸ್ತಿ ಪ್ರತ್ಯೇಕವಾಗಿ ಜಿಲ್ಲಾ ಆಯ್ಕೆ ಸಮಿತಿಯಲ್ಲಿ ಆಯ್ಕೆಗೊಳಿಸಲಾಗುವುದು. ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ 2024 ಮತ್ತು 2025 ವರ್ಷಕ್ಕೆ ಇಬ್ಬರಂತೆ ನಾಲ್ಕು ಹೆಸರುಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸರಕಾರಿ ನೌಕರರ ಸಂಘದ ಸಮನ್ವಯದೊಂದಿಗೆ ಆಯ್ಕೆಗೊಳಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.
ಪ್ರಯುಕ್ತ ಸರಕಾರಿ ಅಧಿಕಾರಿಗಳು/ನೌಕರರು ಈ ಕೆಳಕಂಡ ಲಿಂಕ್ ಬಳಸಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ online link:http://sarvothamaawards.karnataka.gov.in/ರೊಳಗಾಗಿ ನಾಮನಿರ್ದೇಶನ ಸಲ್ಲಿಸಬೇಕೆಂದು ಕೋರಿದ್ದಾರೆ.