ಸೇಡಂ: 15 ರಂದು ಕಾಲಗರ್ಭ ಪುಸ್ತಕ ಬಿಡುಗಡೆ, ಸಂಸ್ಕೃತಿ ಸಮ್ಮಾನ್, ಸೀಗಿ ಸಾಹಿತ್ಯ ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಸೇಡಂ: ಹಿರಿಯ ಸಾಹಿತಿ, ರಂಗಕರ್ಮಿ, ಪತ್ರಕರ್ತ, ಪ್ರಭಾಕರ ಜೋಶಿ ರಚಿಸಿದ ಕಾಲಗರ್ಭ ಕವನ ಸಂಕಲನ ಬಿಡುಗಡೆ ಡಿ.15 ರಂದು ಬೆಳಗ್ಗೆ ಬೆಳಗ್ಗೆ 11.15 ಕ್ಕೆ ಸೇಡಂನ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಾಡಲಾಗುವುದು ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ನಾರಾಯಣ ಪೇಟದ ಶ್ರೀ ಸಂತಮಠದ ಮೂಲ ಸಂಸ್ಥಾನದ ಶಕ್ತಿಪೀಠದ ಪೂಜ್ಯಶ್ರೀ ಸ್ವಾಮಿ ಶಾಂತಾನಂದ ಪುರೋಹಿತ್ ಅವರು, ಸಾನ್ನಿಧ್ಯವಹಿಸಿ, ಪುಸ್ತಕ ಬಿಡುಗಡೆ ಮಾಡುವರು. ಕವಿ, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಪುಸ್ತಕ ಪರಿಚಯ ಮಾಡುವರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಪಸಾರ, ಮಾಜಿ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಭಾಗವಹಿಸುವರು. ಮಾತೃಛಾಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಮಚಂದ್ರ ಜೋಶಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ ಮತ್ತು ಲೇಖಕ, ಪತ್ರಕರ್ತ, ಕಲಾವಿದ ಮಹಿಪಾಲರೆಡ್ಡಿ ಮುನ್ನೂರ ಅವರಿಗೆ ಸಂಸ್ಕೃತಿ ಸಮ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಯನ್ನು ಸೇಡಂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ನಾಗೇಶರಾವ್ ಮಾಲಿ ಪಾಟೀಲ ಪ್ರದಾನ ಮಾಡುವರು ಎಂದು ಆದಿತ್ಯ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.