ಶಹಾಬಾದ: ಅಬಕಾರಿ ದಾಳಿ 40.ಲೀ ಕಲಬೆರಕೆ ಸೇಂದಿ ವಶಕ್ಕೆ ಒರ್ವಳ ಬಂಧನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಲಯ ವ್ಯಾಪ್ತಿಯ ಶಹಾಬಾದ ನಗರದ ಭಾರಿ ನಗರ ಏರಿಯಾ ಶಹಾಬಾದ ಮನೆಯೊಂದರ ಮೇಲೆ ಸೆ.19 ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಅಬಕಾರಿ ದಾಳಿ ಮಾಡಿ 40 ಲೀಟರ್ ಕಲಬೆರಿಕೆ ಸೇಂಧಿಯನ್ನು ಮಾರಾಟಕ್ಕಾಗಿ ಸಂಗ್ರಹಿಸಿದ್ದು ಕಂಡು ಬಂದ ಪ್ರಯುಕ್ತ ಚಂದ್ರಭಾಗ ಹಣಮಂತ ಎಂಬ ಆರೋಪಿತಳ ವಿರುದ್ದ ಘೋರ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚಿತ್ತಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಶರಣಗೌಡ ಬಿರಾದಾರ ತಿಳಿಸಿದ್ದಾರೆ.
ಅಪರ ಆಯುಕ್ತರು (ಅಪರಾಧ)ಕೇಂದ್ರಸ್ಥಾನ ಬೆಳಗಾವಿ ರವರ ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾ&ತ) ಕಲಬುರ್ಗಿ ವಿಭಾಗ ರವರ ಆದೇಶ ಮೇರೆಗೆ ಹಾಗೂ ಅಬಕಾರಿ ಉಪ ಆಯುಕ್ತರು ಕಲಬುರಗಿ ರವರ ಮಾರ್ಗದರ್ಶನ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ರವರ ನೇತೃತ್ವದದಲ್ಲಿ ನಡೆದ ದಾಳಿಯಲ್ಲಿ ಚಿಂಚೋಳಿ, ಸೇಡಂ, ಚಿತ್ತಾಪುರ ವಲಯದ ಅಧಿಕಾರಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.