Oplus_131072

ಕೆ.ಬಿ ಶಾಣಪ್ಪ 4 ನೇ ಪುಣ್ಯಸ್ಮರಣೆ, ಮಾಜಿ ಸಚಿವ ದಿ,ಕೆ.ಬಿ ಶಾಣಪ್ಪ ಕೊಡುಗೆ ಅಪಾರ: ಎಂ.ಎ ರಷೀದ್ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಮುತ್ಸದ್ದಿ ನಾಯಕ, ಮಾಜಿ ಸಚಿವ ದಿ,ಕೆ.ಬಿ ಶಾಣಪ್ಪ ರವರು ಶಹಾಬಾದ ನಗರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಾಡಾ ನಿಗಮದ ಅಧ್ಯಕ್ಷ ಡಾ. ಎಂ.ಎ ರಷೀದ್ ಹೇಳಿದರು.

ನಗರದಲ್ಲಿ ಮಾಜಿ ಸಚಿವ ದಿ. ಕೆ.ಬಿ ಶಾಣಪ್ಪ ರವರ 4ನೇ ಪುಣ್ಯ ಸ್ಮರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರು ಹಾಗೂ ಶೋಷಿತ ವರ್ಗದ ಹಿತಕ್ಕಾಗಿ ಅವಿರತ ಶ್ರಮಿಸಿದ ಮುತ್ಸದ್ದಿ ನಾಯಕರಾಗಿದ್ದರು ಎಂದರು.

ಮುಖಂಡ ಡಿ.ಡಿ ಓಣಿ ಮಾತನಾಡಿ, ಕೆ.ಬಿ ಅವರು ತಮ್ಮ ಜೀವಿತ ಕಾಲದಲ್ಲಿ ಸಿದ್ದಾಂತ ಮರೆತು ಬದುಕಿದವರಲ್ಲ, ಅವರು ಶ್ರಮಜೀವಿ ಮತ್ತು ಸ್ನೇಹ ಜೀವಿಯಾಗಿದ್ದರು, ಶಹಾಬಾದ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ, ಮೇಲು ಸೇತುವೆ ಹಾಗೂ ಮಾದಿಗ ಸಮಾಜದ ರುದ್ರಭೂಮಿ ಅವರು ನಗರಕ್ಕೆ ಕೊಟ್ಟಂತ ಬಹು ದೊಡ್ಡ ಕೊಡುಗೆ ಯಾಗಿದೆ ಎಂದು ಸ್ಮರಿಸಿದರು.

ನಾಡು ಕಂಡ ಸಜ್ಜನ ರಾಜಕಾರಣಿ ಆಗಿದ್ದ ಅವರು ಕಾರ್ಮಿಕ ನಾಯಕರಾಗಿ, ಶಾಸಕರಾಗಿ ಜನಾನುರಾಗಿ ಆಗಿದ್ದರು. ಜೆ. ಎಚ್. ಪಟೇಲ್ ಸರಕಾರದಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಸಂಸದೀಯ ಪಟುವಾಗಿ ಕಿರಿಯ ಶಾಸಕರಿಗೆ, ಸಂಸದರಿಗೆ ಮಾರ್ಗದರ್ಶಕರೂ ಆಗಿದ್ದರು ಎಂದರು. ವಿನೋದ ಕೆ.ಬಿ, ಯವರು ದಿ. ಕೆ.ಬಿ ಶಾಣಪ್ಪ ನವರನ್ನು ಸ್ಮರಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಜಮಲಾಬಾಯಿ ಕೆ.ಬಿ, ಪಾರ್ವತಮ್ಮ, ವಿಜಯಮ್ಮ ನಾಗೇಶ, ಆದಿಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ನಾಗೇಶ, ಮಾದಿಗ ಸಮಾಜದ ಆಧ್ಯಕ್ಷ ವಿಕ್ರಮ ಮೂಲಿಮನಿ, ಭೀಮ ಜಯಂತಿ ಅಧ್ಯಕ್ಷ ಶಂಕರ ಅಳೋಳ್ಳಿ, ಲಕ್ಷ್ಮೀಕಾಂತ ಬಳಿಚಕ್ರ, ಶಿವರಾಜ ಕೋರಿ, ಶಿವರಾಜ ಜೀನಕೇರಿ, ಕಿರಣ ಕೋರೆ, ರಾಜು ಜಂಬಗಿ, ಪ್ರಮೋದ ಮಲ್ಹಾರ, ಮಲ್ಲೇಶಿ ಸೈದಾಪೂರ, ರವಿ ಬೆಳಮಗಿ, ಅಮರ ಕೋರೆ, ನಾಗರಾಜ ಮುದ್ನಾಳ, ನವೀನ ಸಿಪ್ಪಿ, ಭೀಮಯ್ಯ ಗುತ್ತೇದಾರ, ಅನಿಲ್ ಮೈನಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಬಾದ ವರದಿ- ನಾಗರಾಜ್ ದಂಡಾವತಿ.

Spread the love

Leave a Reply

Your email address will not be published. Required fields are marked *

error: Content is protected !!