ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ನೌಕರರ ಹಿತಾಸಕ್ತಿ ಕಾಪಾಡಿ ಪರಿಹಾರಕ್ಕೆ ಶ್ರಮಿಸಿ: ಜಗದೀಶ ಚೌರ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಸರ್ಕಾರಿ ನೌಕರರು ನಾವು ಒಂದಾಗಿ ಕೆಲಸ ಮಾಡಿದರೆ ಯಾವ ರೀತಿಯ ಸವಾಲುಗಳಾದರೂ ದಾಟಬಹುದು ಈ ನಿಟ್ಟಿನಲ್ಲಿ ನೌಕರರ ಹಿತಾಸಕ್ತಿ ಕಾಪಾಡಿ ಪರಿಹಾರಕ್ಕೆ ಶ್ರಮಿಸಿ ಎಂದು ತಾಲೂಕು ತಹಶೀಲ್ದಾರ್ ಜಗದೀಶ ಚೌರ್ ಹೇಳಿದರು.
ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂತನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರೆ ಸಾಲದು, ನೌಕರರ ಬೇಕು-ಬೇಡಿಕೆಗಳಿಗೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಸರ್ವರು ಮುನ್ನೆಡೆಯಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಸರ್ಕಾರಿ ನೌಕರರರು ಒಗ್ಗಟ್ಟು ಇದ್ದಾಗ ಮಾತ್ರ ರಕ್ಷಣೆ ಸಾಧ್ಯ ಹಾಗೂ ಅಧಿಕಾರವಧಿಯಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಸಮನ್ವಯ ಸಾಧಿಸಲು, ನೌಕರರ ಹಕ್ಕುಗಳ ರಕ್ಷಣೆಗೆ ಹಾಗೂ ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಸಂಘ ಬದ್ಧವಾಗಿದೆ, 10 ಸಾವಿರ ಚುನಾಯಿತ ನಿರ್ದೇಶಕರ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಯುತ್ತಿದೆ, ನೆನೆಗುದಿಗೆ ಬಿದ್ದಿದ್ದ 7ನೇ ವೇತನ ಆಯೋಗ ಜಾರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮತ್ತು ಸರ್ಕಾರಿ ನೌಕರರ ಸಂಘದ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಮಾತನಾಡಿ, ತಮ್ಮ ನೇತೃತ್ವದಲ್ಲಿ ಸಂಘದ ನೌಕರರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕಲು ಶ್ರಮಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆ ಮೇಲೆ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ತಾ. ಪಂ ಇಒ ಮಲ್ಲಿನಾಥ ರಾವೂರ, ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಸಮಾಜ ಕಲ್ಯಾಣ ಇಲಾಖೆಯ ಅನಿತಾ, ಹಾಜಪ್ಪ ಬಿಳಾರ ಇದ್ದರು.
ಈ ಸಂಧರ್ಭದಲ್ಲಿ ಶಿವಲಿಂಗಪ್ಪ ಹೆಬ್ಬಾಳಕರ, ಡಾ. ವೆಂಕಟೇಶ ನಾಯ್ಕೋಡಿ, ಮಾರುತಿ ಪೂಜಾರಿ, ವೆಂಕಟೇಶ ಚಿನ್ನೂರ, ಶಕುಂತಲಾ ಸಾಕರೆ, ನಜೀರ ಮುಲ್ಲಾ, ಸುಲೋಚನಾ ಜಾಧವ, ಮೇಘಾ ಜಂಬಗಿ ಸೇರಿದಂತೆ ನೂರಾರು ಸರಕಾರಿ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶ್ರೀಧರ ನಾಗನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮೇಘಾ ಜಂಬಗಿ ಪ್ರಾರ್ಥನಾ ಗೀತೆ ಹಾಡಿದರು, ಉದಯಕುಮಾರ ಸ್ವಾಗತಿಸಿದರು, ಬನ್ನಪ್ಪ ಸೈದಾಪುರ ನಿರೂಪಿಸಿದರು, ಜಗಪ್ಪ ಹೊಸಮನಿ ವಂದಿಸಿದರು.
ಶಹಾಬಾದ ಸುದ್ದಿ: ನಾಗರಾಜ್ ದಂಡಾವತಿ