ದೇಶದ ಭದ್ರ ಬುನಾದಿಗೆ ಸಂವಿಧಾನವೇ ಆಧಾರಸ್ತಂಭ: ಶಾಸಕ ಮತ್ತಿಮುಡ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ದೇಶ ಸದೃಢವಾಗಿ ಮುಂದುವರೆಯಲು ಡಾ. ಬಿ.ಆರ್.ಅಂಬೇಡ್ಕರ್ ಅವರು ಬಲಿಷ್ಠವಾದ ಸಂವಿಧಾನ ನೀಡಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಹೇಳಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ 76 ನೇ ಗಣರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಹಾಗೂ ಪ್ರಗತಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಸುಪರ್ ಪವಾರ್ ರಾಷ್ಟ್ರವನ್ನಾಗಿ ಮಾಡಿದೆ ಹಾಗೆ ಈ ಗಣರಾಜ್ಯೋತ್ಸವದಂದು ಪ್ರತಿಯೊಬ್ಬರೂ ದೇಶ ಕಟ್ಟಲು ಸಂಕಲ್ಪ ಮಾಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಜಗದೀಶ್ ಚೌರ್ ರವರು ಧ್ವಜಾರೋಹಣ ನೆರವೇರಿಸಿ, ಧ್ವಜ ಸಂದೇಶ ನೀಡಿ ಮಾತನಾಡಿದರು. ನಗರಸಭೆ ಪೌರಾಯುಕ್ತ ಡಾ. ಕೆ ಗುರುಲಿಂಗಪ್ಪ ಮಾತನಾಡಿದರು.
ವೇದಿಕೆ ಮೇಲೆ ಡಿವೈಎಸ್ಪಿ ಶಂಕರಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ತಾ.ಪಂ. ಇಒ ಮಲ್ಲಿನಾಥ ರಾವೂರ, ಸಿಪಿಐ ನಟರಾಜ್ ಲಾಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಇದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಒನ್ ಅಡಿಯಲ್ಲಿ ಉತ್ತಮ ನಾಗರಿಕ ಸೇವೆ ಸಲ್ಲಿಸಿದವರಿಗೆ ಹಾಗೂ ಫಸಲ್ ಭೀಮಾ ಯೋಜನೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ನಾಗಮ್ಮ ಚನ್ನಪ್ಪ ಇಂಗನಶೆಟ್ಟಿ ಶಾಲೆ ಹಾಗೂ ಕೂಡಲಸಂಗಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿವಿಧ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು. ದೈಹಿಕ ಶಿಕ್ಷಕ ಬನ್ನಪ್ಪ ನಿರೂಪಿಸಿದರು, ಅಣವೀರಪ್ಪ ಸ್ವಾಗತಿಸಿದರು, ಹನುಮಂತರಾವ ಪಾಟೀಲ ವಂದಿಸಿದರು.